ADVERTISEMENT

ಚಳಿಗಾಲದ ಒಲಿಂಪಿಕ್ಸ್‌: ಅಲಿನಾಗೆ ಚಿನ್ನದ ಸಂಭ್ರಮ

ಪಿಟಿಐ
Published 23 ಫೆಬ್ರುವರಿ 2018, 19:30 IST
Last Updated 23 ಫೆಬ್ರುವರಿ 2018, 19:30 IST
ಮಹಿಳೆಯರ ಫಿಗರ್‌ ಸ್ಕೇಟಿಂಗ್‌ನಲ್ಲಿ ಚಿನ್ನ ಗೆದ್ದ ರಷ್ಯಾದ ಅಲಿನಾ ಜಗಿಟೋವ (ಮಧ್ಯ) ಬೆಳ್ಳಿ ಗೆದ್ದ ಎವ್ಜಿನಿಯಾ ಮಡ್ವೆಲ್ಡೊವ (ಎಡ) ಮತ್ತು ಕಂಚು ಗಳಿಸಿದ ಕ್ಯಾಟಲಿನ್‌ ಓಸ್ಮಂಡ್ ಅವರೊಂದಿಗೆ ರಾಯಿಟರ್ಸ್‌ ಚಿತ್ರ
ಮಹಿಳೆಯರ ಫಿಗರ್‌ ಸ್ಕೇಟಿಂಗ್‌ನಲ್ಲಿ ಚಿನ್ನ ಗೆದ್ದ ರಷ್ಯಾದ ಅಲಿನಾ ಜಗಿಟೋವ (ಮಧ್ಯ) ಬೆಳ್ಳಿ ಗೆದ್ದ ಎವ್ಜಿನಿಯಾ ಮಡ್ವೆಲ್ಡೊವ (ಎಡ) ಮತ್ತು ಕಂಚು ಗಳಿಸಿದ ಕ್ಯಾಟಲಿನ್‌ ಓಸ್ಮಂಡ್ ಅವರೊಂದಿಗೆ ರಾಯಿಟರ್ಸ್‌ ಚಿತ್ರ   

ಗಾಂಗ್ ನ್ಯೂಂಗ್‌, ದಕ್ಷಿಣ ಕೊರಿಯಾ (ಎಎಫ್‌ಪಿ): ರಷ್ಯಾದ  ಫಿಗರ್ ಸ್ಕೇಟರ್‌ ಅಲಿನಾ ಜಗಿಟೋವ ಚಿನ್ನ ಗೆದ್ದು ಸಂಭ್ರಮಿಸಿದರು. ಈ ಮೂಲಕ ತಮ್ಮ ದೇಶಕ್ಕೆ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಈ ಬಾರಿಯ ಮೊದಲ ಚಿನ್ನ ಗಳಿಸಿಕೊಟ್ಟರು. ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ತಮ್ಮದೇ ರಾಷ್ಟ್ರದ ಎವ್ಜಿನಿಯಾ ಮಡ್ವೆಲ್ಡೊವ ಅವರನ್ನು ಅಲಿನಾ ಹಿಂದಿಕ್ಕಿದರು. ಕೆನಡಾದ ಕ್ಯಾಟಲಿನ್ ಓಸ್ಮಂಡ್‌ ಕಂಚಿನ ಪದಕ ಗೆದ್ದರು.

15 ವರ್ಷದ ಅಲಿನಾ 1.31 ಪಾಯಿಂಟ್‌ ಅಂತರದಲ್ಲಿ ತಮ್ಮ ಗೆಳತಿ ಹಾಗೂ ಎರಡು ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಎವ್ಜಿನಿಯಾ ಸವಾಲನ್ನು ಮೆಟ್ಟಿ ನಿಂತರು. ಪ್ರಶಸ್ತಿ ಗೆದ್ದ ನಂತರ ಸಂತಸದಲ್ಲಿ ಭಾವುಕರಾದರು.

‘ನಾನು ಚಾಂಪಿಯನ್ ಆಗಿದ್ದೇನೆ ಎಂಬ ವಾಸ್ತವವನ್ನು ನಂಬಲು ಆಗುತ್ತಿಲ್ಲ. ಈ ಸಂಭ್ರಮವನ್ನು ಹೇಗೆ ಆಚರಿಸಬೇಕು ಎಂದೇ ತಿಳಿಯುತ್ತಿಲ್ಲ’ ಎಂದು ಹೇಳಿದರು.

ADVERTISEMENT

ಕೆನಡಾ ತಂಡಕ್ಕೆ ಆಘಾತ: ಕೆನಡಾದ ಪುರುಷರ ಕರ್ಲಿಂಗ್‌ ತಂಡದವರು ಶುಕ್ರವಾರ ಆಘಾತ ಅನುಭವಿಸಿದರು. ಕಳೆದ ಮೂರು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ತಂಡ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಸ್ವಿಟ್ಜರ್ಲೆಂಡ್‌ಗೆ 5–7ರಿಂದ ಮಣಿಯಿತು.

ಈ ಸ್ಪರ್ಧೆಯನ್ನು 1998ರಲ್ಲಿ ಕೂಟದಲ್ಲಿ ಮರು ಸೇರ್ಪಡೆ ಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.