ADVERTISEMENT

ಚೆಸ್‌: ಅದಿಬಾನ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 28 ಮೇ 2016, 19:30 IST
Last Updated 28 ಮೇ 2016, 19:30 IST

ತಾಷ್ಕೆಂಟ್‌, ಉಜ್‌ಬೇಕಿಸ್ತಾನ (ಪಿಟಿಐ): ಕಾಯಿಗಳನ್ನು ಚುರುಕಾಗಿ ಮುನ್ನಡೆಸಿದ ಭಾರತದ ಬಿ. ಅದಿಬಾನ್‌  ಇಲ್ಲಿ ನಡೆಯುತ್ತಿರುವ ಏಷ್ಯನ್‌ ಚೆಸ್‌ ಚಾಂಪಿಯನ್‌ಷಿಪ್‌ನ ಮೂರನೇ ಸುತ್ತಿನ ಪಂದ್ಯದಲ್ಲಿ ಗೆಲುವು ಪಡೆದಿದ್ದಾರೆ.

ಶನಿವಾರ ನಡೆದ ಹಣಾಹಣಿಯಲ್ಲಿ ಅದಿಬಾನ್‌ ಮಂಗೋಲಿಯಾದ ಬ್ಯಾಟರ್‌ಡೆನ್‌ ಸೊಗ್ಬಾಯರ್ ಎದುರು ಗೆಲುವು ಪಡೆದರು. ಭಾರತದ ಆಟಗಾರನ ಬಳಿ ಒಟ್ಟು ಎರಡು ಪಾಯಿಂಟ್ಸ್‌ ಇವೆ. ಇನ್ನೊಂದು ಪಂದ್ಯದಲ್ಲಿ ಭಾರತದ ಅಭಿಜಿತ್ ಗುಪ್ತಾ ಜಯ ಪಡೆದರು.ಮೂರನೇ ಸುತ್ತಿನಲ್ಲಿ ಅಭಿಜಿತ್‌ ಉಜ್‌ಬೇಕಿಸ್ತಾನದ ಅಲಿಷೇರ್‌ ಬೆಜ್ಮುರಾಟೊವ್‌ ಅವರನ್ನು ಮಣಿಸಿದರು.  ಅಭಿಜಿತ್ ಒಟ್ಟು ಎರಡು ಪಾಯಿಂಟ್ಸ್ ಹೊಂದಿದ್ದಾರೆ.

ಅಜರ್‌ಬೈಜಾನ್‌ ವರದಿ: ಇಲ್ಲಿ ನಡೆಯುತ್ತಿರುವ ಶಮ್ಕೀರ್‌ ಚೆಸ್‌ ಟೂರ್ನಿಯ ಮೂರನೇ ಸುತ್ತಿನ ಪಂದ್ಯದಲ್ಲಿ ಗ್ರ್ಯಾಂಡ್‌ ಮಾಸ್ಟರ್‌ ಭಾರತ ಪಿ. ಹರಿಕೃಷ್ಣನ್‌ ನಿರಾಸೆ ಅನುಭವಿಸಿದರು.ರಷ್ಯಾದ ಸೆರ್ಜೆಯೊ ಕಾರ್ಜಿಕಿನ್‌ ಅವರು ಹರಿಕೃಷ್ಣನ್‌ ಎದುರು ಜಯ ಪಡೆದರು. ಭಾರತದ ಆಟಗಾರನ ಬಳಿ ಈಗ ಒಟ್ಟು 2.5 ಪಾಯಿಂಟ್ಸ್‌ ಇವೆ. ಕಾರ್ಜಿಕಿನ್‌ ಎರಡು ಪಾಯಿಂಟ್ಸ್‌ ಕಲೆ ಹಾಕಿದ್ದಾರೆ.

ಇನ್ನೊಂದು ಪಂದ್ಯದಲ್ಲಿ  ಫ್ಯಾಬಿ ಯಾನೊ ಕರುವಾನ ಚೀನಾದ ಯಿಫಿನ್‌ ಹೂ ಅವರನ್ನು ಮಣಿಸಿದರು.  ಇನ್ನೊಂದು ಪಂದ್ಯದಲ್ಲಿ  ರಾಜ್‌ಬೋವ್‌ ವಿರುದ್ಧ ನೆದರ್ಲೆಂಡ್ಸ್‌ನ ಅನಿಷ್‌ ಗಿರಿ ಪಂದ್ಯ ಡ್ರಾ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.