ADVERTISEMENT

ಟಿಟಿ: ನಾಲ್ಕರ ಘಟ್ಟಕ್ಕೆ ಶರತ್

ಪಿಟಿಐ
Published 18 ಫೆಬ್ರುವರಿ 2017, 19:30 IST
Last Updated 18 ಫೆಬ್ರುವರಿ 2017, 19:30 IST
ನವದೆಹಲಿ: ಅಚಂತ ಶರತ್ ಕಮಲ್ ಇಲ್ಲಿ ನಡೆಯುತ್ತಿರುವ ಐಟಿಟಿಎಫ್ ವಿಶ್ವ ಟೂರ್ ಇಂಡಿಯಾ ಓಪನ್ ಟೇಬಲ್ ಟೆನಿಸ್ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದರು. 
 
ಶನಿವಾರ ನಡೆದ ಎಂಟರ ಘಟ್ಟದ ಪಂದ್ಯದಲ್ಲಿ  ಕಮಲ್ 11-4, 10-12, 9-11, 11-6, 11-9, 9-11, 13-11 ಗೇಮ್‌ಗಳಿಂದ ತಮ್ಮ ಕಟ್ಟಾ ಎದುರಾಳಿ   ಇಂಗ್ಲೆಂಡನ್‌ ಪಾಲ್ ಡ್ರಿಂಕ್‌ಹಾಲ್ ವಿರುದ್ಧ ಜಯಿಸಿದರು. 
 
ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಕಮಲ್ ಅವರು ಸಾಕಷ್ಟು ಬೆವರು ಹರಿಸಬೇಕಾಯಿತು.  ಮೊದಲ ಗೇಮ್‌ನಲ್ಲಿ ಕಮಲ್ ಜಯ ಸಾಧಿಸಿದರು. ಆದರೆ, ಎರಡು ಮತ್ತು ಮೂರನೇ ಸೆಟ್‌ನಲ್ಲಿ ಸೋಲನುಭವಿ ಸಿದರು. ಮತ್ತೆ ತಿರುಗೇಟು ನೀಡಿದ ಅವರು ನಾಲ್ಕು ಹಾಗೂ ಐದನೇ ಗೇಮ್‌ಗಳನ್ನು ತಮ್ಮದಾಗಿಸಿ ಕೊಂಡರು. ಆದ್ದರಿಂದ ಟೈಬ್ರೇಕರ್‌ ನಲ್ಲಿ ಫಲಿತಾಂಶ ನಿರ್ಧಾರವಾಯಿತು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.