ADVERTISEMENT

ಟಿ–20 ಪಂದ್ಯಕ್ಕೆ ಬರ್ಸಪಾರ ಆತಿಥ್ಯ

ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಯ ಒಂದು ಪಂದ್ಯ ಬೆಂಗಳೂರಿನಲ್ಲಿ

ಪಿಟಿಐ
Published 1 ಆಗಸ್ಟ್ 2017, 19:27 IST
Last Updated 1 ಆಗಸ್ಟ್ 2017, 19:27 IST

ಕೋಲ್ಕತ್ತ: ಗುವಾಹಟಿಯಲ್ಲಿ ಹೊಸದಾಗಿ ನಿರ್ಮಿಸಿರುವ ಪರ್ಸಪಾರ ಕ್ರೀಡಾಂಗಣವು ಸೆಪ್ಟೆಂಬರ್‌ ತಿಂಗಳಲ್ಲಿ ಆಸ್ಟ್ರೇಲಿಯಾ ವಿರುದ್ಧದ  ಟ್ವೆಂಟಿ–20 ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಇದೇ ತಂಡದ ಎದುರಿನ ಏಕದಿನ ಸರಣಿಯ ಒಂದು ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ವೇದಿಕೆಯಾಗಲಿದೆ. ಇಲ್ಲಿ ಮಂಗಳವಾರ ನಡೆದ ಬಿಸಿಸಿಐನ ಪ್ರವಾಸ ಮತ್ತು ವೇಳಾಪಟ್ಟಿ ನಿಗದಿ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಶ್ರೀಲಂಕಾ ವಿರುದ್ಧ ಡಿಸೆಂಬರ್‌ನಲ್ಲಿ ನಡೆಯಲಿರುವ ಮೂರು ಟೆಸ್ಟ್ ಪಂದ್ಯಗಳಿಗೆ ಕೋಲ್ಕತ್ತ, ನಾಗ್ಪುರ ಮತ್ತು ದೆಹಲಿ ಆತಿಥ್ಯ ವಹಿಸಲಿವೆ. ಶ್ರೀಲಂಕಾ ವಿರುದ್ಧದ ಟ್ವೆಂಟಿ20 ಸರಣಿಯ ಒಂದು ಪಂದ್ಯವನ್ನು ಕೊಚ್ಚಿಯ ಕ್ರೀಡಾಂಗಣ ಅಥವಾ ತಿರುವನಂತಪುರದಲ್ಲಿ ಹೊಸದಾಗಿ ನಿರ್ಮಿಸಿರುವ ಕ್ರೀಡಾಂಗಣದಲ್ಲಿ ಆಯೋಜಿಸಲು ಸಮಿತಿ ನಿರ್ಧರಿಸಿದೆ.

ಸೆಪ್ಟೆಂಬರ್‌ ಕೊನೆಯ ವಾರದಿಂದ ಡಿಸೆಂಬರ್‌ ವರೆಗೆ ನಡೆಯಲಿರುವ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ಎದುರಿನ ಸರಣಿಗಳಲ್ಲಿ ಒಟ್ಟು 23 ಪಂದ್ಯಗಳನ್ನು ಭಾರತ ತಂಡ ಆಡಲಿದೆ. ಪಂದ್ಯಗಳು ನಡೆಯುವ ಸ್ಥಳವನ್ನು ಮಾತ್ರ ಪ್ರಕಟಿಸಿರುವ ಸಮಿತಿಯು ದಿನಾಂಕಗಳನ್ನು ತಿಳಿಸಿಲ್ಲ.

ADVERTISEMENT

ಯಾವ ಪಂದ್ಯ ಎಲ್ಲೆಲ್ಲಿ?
ಆಸ್ಟ್ರೇಲಿಯಾ ಎದುರಿನ ಐದು ಏಕದಿನ ಪಂದ್ಯಗಳು: ಚೆನ್ನೈ, ಬೆಂಗಳೂರು, ನಾಗ್ಪುರ, ಇಂದೋರ್, ಕೋಲ್ಕತ್ತ; ಟ್ವಿಂಟಿ 20 ಪಂದ್ಯಗಳು: ಹೈದರಾಬಾದ್‌, ರಾಂಚಿ, ಗುವಾಹಟಿಯ ಬರ್ಸಾಪುರ; ನ್ಯೂಜಿಲೆಂಡ್ ಎದುರಿನ ಏಕದಿನ ಪಂದ್ಯಗಳು: ಪುಣೆ, ಮುಂಬೈ, ಕಾನ್ಪುರ; ಟ್ವಿಂಟಿ20 ಪಂದ್ಯಗಳು: ದೆಹಲಿ, ಕಟಕ್‌, ರಾಜ್‌ಕೋಟ್‌. ಶ್ರೀಲಂಕಾ ಎದುರಿನ ಟೆಸ್ಟ್ ಪಂದ್ಯಗಳು: ಕೋಲ್ಕತ್ತ, ನಾಗ್ಪುರ, ದೆಹಲಿ; ಏಕದಿನ ಪಂದ್ಯಗಳು: ಧರ್ಮಶಾಲಾ, ಮೊಹಾಲಿ, ವಿಶಾಖಪಟ್ಟಣ; ಟ್ವಿಂಟಿ 20 ಪಂದ್ಯಗಳು: ಕೊಚ್ಚಿ ಅಥವಾ ತಿರುವನಂತಪುರ, ಇಂದೋರ್, ಮುಂಬೈ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.