ADVERTISEMENT

ಟೆನಿಸ್: ನಾಲ್ಕರ ಘಟ್ಟಕ್ಕೆ ನಡಾಲ್‌

ರಾಯಿಟರ್ಸ್
Published 29 ಏಪ್ರಿಲ್ 2017, 19:30 IST
Last Updated 29 ಏಪ್ರಿಲ್ 2017, 19:30 IST
ರಫೆಲ್‌ ನಡಾಲ್‌
ರಫೆಲ್‌ ನಡಾಲ್‌   

ಬಾರ್ಸಿಲೋನಾ: ಬಾರ್ಸಿಲೋನಾ ಓಪನ್‌ ಟೂರ್ನಿಯಲ್ಲಿ ಅಮೋಘ ಆಟ ಮುಂದುವರಿಸಿರುವ ಸ್ಪೇನ್‌ನ ಆಟಗಾರ ರಫೆಲ್‌ ನಡಾಲ್‌ ಅವರು ಸಿಂಗಲ್ಸ್‌ ವಿಭಾಗದಲ್ಲಿ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ.

ಶುಕ್ರವಾರ ರಾತ್ರಿ ನಡೆದ ಕ್ವಾರ್ಟರ್ ಫೈನಲ್‌ ಹಣಾಹಣಿಯಲ್ಲಿ ಮೂರನೇ ಶ್ರೇಯಾಂಕದ ಆಟಗಾರ ನಡಾಲ್‌ 7–6, 6–2ರ ನೇರ ಸೆಟ್‌ಗಳಿಂದ ದಕ್ಷಿಣ  ಕೊರಿಯಾದ ಚುಂಗ್‌ ಹ್ಯುಯೆನ್‌ ವಿರುದ್ಧ ಗೆಲುವು ಗಳಿಸಿದರು. ಇದರೊಂದಿಗೆ ಬಾರ್ಸಿಲೋನಾ ಟೂರ್ನಿಯಲ್ಲಿ ಹತ್ತನೇ ಬಾರಿ ಸೆಮಿಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದರು.

ಹೋದ ವಾರ ಮಾಂಟೆ ಕಾರ್ಲೊ ಮಾಸ್ಟರ್ಸ್‌ ಟೂರ್ನಿಯಲ್ಲಿ ಪ್ರಶಸ್ತಿ ಎತ್ತಿಹಿಡಿದು ವಿಶ್ವಾಸದಿಂದ ಬೀಗುತ್ತಿದ್ದ ನಡಾಲ್‌ ದಿಟ್ಟ ಆರಂಭ ಪಡೆಯಲು ವಿಫಲರಾದರು.

ADVERTISEMENT

ಶುರುವಿನಿಂದಲೇ ಚುರುಕಾಗಿ ಆಡಿದ ಶ್ರೇಯಾಂಕ ರಹಿತ ಆಟಗಾರ ಚುಂಗ್‌ 3–1ರ ಮುನ್ನಡೆ ಹೊಂದಿದ್ದರು. ಗ್ರ್ಯಾಂಡ್‌ಸ್ಲಾಮ್‌ನಲ್ಲಿ 14 ಬಾರಿ ಟ್ರೋಫಿ ಎತ್ತಿ ಹಿಡಿದಿರುವ ಅನುಭವಿ ನಡಾಲ್‌ ಆ ಬಳಿಕ ಪುಟಿದೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.