ADVERTISEMENT

ಟೆನಿಸ್‌: ಫೈನಲ್‌ನಲ್ಲಿ ಆಯುಷ್‌–ಮೋನಿಲ್‌ ಮುಖಾಮುಖಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 19:44 IST
Last Updated 19 ಜನವರಿ 2017, 19:44 IST

ಬೆಂಗಳೂರು: ಕರ್ನಾಟಕದ  ಆಯುಷ್‌ ಪಿ. ಭಟ್‌ ಮತ್ತು ಮೋನಿಲ್‌ ಲೋಟ್ಲಿಕರ್‌ ಅವರು ಎಎನ್‌ಟಿ–ಎಐಟಿಎ 14 ವರ್ಷ ದೊಳಗಿನವರ ಚಾಂಪಿಯನ್‌ಷಿಪ್‌ ಸೀರಿಸ್‌ ಟೆನಿಸ್‌ ಟೂರ್ನಿಯ ಬಾಲಕರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ.

ಗುರುವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಆಯುಷ್‌ 6–3, 7–6 ರಲ್ಲಿ ತಮಿಳುನಾಡಿನ  ಕೆ.ಎಸ್‌. ಕೆವಿನ್‌ ಕಾರ್ತಿಕ್‌್ ಅವರನ್ನು  ಸೋಲಿಸಿದರು.
ನಾಲ್ಕರ ಘಟ್ಟದ ಇನ್ನೊಂದು ಹೋರಾಟದಲ್ಲಿ ಮೋನಿನ್‌ 3–6, 7–5, 6–2ರಲ್ಲಿ  ಸಹೋದರ  ರೋನಿನ್‌ ಲೋಟ್ಲಿಕರ್‌  ವಿರುದ್ಧ ಗೆದ್ದರು.

ಎರಿಕ್‌–ಅರ್ಜುನ್‌ಗೆ ಪ್ರಶಸ್ತಿ: ಬಾಲಕರ ಡಬಲ್ಸ್‌ ವಿಭಾಗದಲ್ಲಿ ಎರಿಕ್‌ ನಿತಿಲಾನ್‌ ಮತ್ತು ಅರ್ಜುನ್‌ ಪ್ರೇಮ್‌ ಕುಮಾರ್‌ ಅವರು ಪ್ರಶಸ್ತಿ ಎತ್ತಿ ಹಿಡಿದರು.
ಫೈನಲ್‌ನಲ್ಲಿ ಎರಿಕ್‌ ಮತ್ತು ಅರ್ಜುನ್‌ 6–4, 6–3ರ ನೇರ ಸೆಟ್‌ ಗಳಿಂದ ಕೆವಿನ್‌ ಕಾರ್ತಿಕ್ ಮತ್ತು ಸ್ಕಂದ ಪ್ರಸನ್ನ ರಾವ್‌ ಅವರನ್ನು ಸೋಲಿಸಿದರು.

ADVERTISEMENT

ಫೈನಲ್‌ಗೆ ಲಕ್ಷಣ್ಯ: ಬಾಲಕಿಯರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಕರ್ನಾಟಕದ ಲಕ್ಷಣ್ಯ ವಿಶ್ವನಾಥ್‌  6–2, 6–1ರಿಂದ ಯಶೋಮತಿ ಅವರನ್ನು ಮಣಿಸಿದರು. ಇನ್ನೊಂದು ಪಂದ್ಯದಲ್ಲಿ  ತಮಿಳುನಾಡಿನ ಎಸ್‌.ಆರ್‌. ಅನನ್ಯ     6–3, 6–0ರಲ್ಲಿ ಎ. ನಾಗ ರೋಷಿನಿ ವಿರುದ್ಧ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.