ADVERTISEMENT

ಟೆನಿಸ್‌: ಯೂಕಿಗೆ ನಿರಾಸೆ

ಪಿಟಿಐ
Published 23 ಆಗಸ್ಟ್ 2017, 19:59 IST
Last Updated 23 ಆಗಸ್ಟ್ 2017, 19:59 IST

ನ್ಯೂಯಾರ್ಕ್‌: ಭಾರತದ ಯೂಕಿ ಭಾಂಬ್ರಿ ಅವರು ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ನಿರಾಸೆ ಅನುಭವಿಸಿದ್ದಾರೆ.

ಬುಧವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಯೂಕಿ 6–1, 1–6, 3–6ರಲ್ಲಿ ಜಪಾನ್‌ನ ಗೊ ಸೊಯೆಡಾ ವಿರುದ್ಧ ಸೋತರು.

ಮೊದಲ ಸೆಟ್‌ನಲ್ಲಿ ಯೂಕಿ ಅವರು ಮಿಂಚಿನ ಆಟವಾಡಿದ್ದರು. ಎರಡು ಮತ್ತು ಮೂರನೇ ಸೆಟ್‌ಗಳಲ್ಲಿ ಎದುರಾಳಿಯ ಸವಾಲು ಮೀರಿ ನಿಲ್ಲಲು ವಿಫಲರಾದರು.

ADVERTISEMENT

ಪ್ರಜ್ಞೇಶ್‌ ಗುಣೇಶ್ವರನ್‌ 1–6, 4–6ರಲ್ಲಿ ಜರ್ಮನಿಯ ಹಾನ್ಫ್‌ಮನ್‌ ವಿರುದ್ಧ ಪರಾಭವಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.