ADVERTISEMENT

ಡಿಪಿಎಸ್‌ ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 3 ಮೇ 2016, 19:30 IST
Last Updated 3 ಮೇ 2016, 19:30 IST

ಬೆಂಗಳೂರು: ಡಿಪಿಎಸ್‌ ಈಸ್ಟ್ ತಂಡ ಇಲ್ಲಿ ನಡೆಯುತ್ತಿರುವ ಜಾಕ್ ಪ್ರೀಮಿಯರ್ ಲೀಗ್ ಟ್ವೆಂ–20 ಕ್ರಿಕೆಟ್ ಟೂರ್ನಿಯ ಮಂಗಳವಾರದ ಪಂದ್ಯದಲ್ಲಿ ಜೆಎಸಿಎ ಲಯನ್ಸ್ ತಂಡವನ್ನು ಮಣಿಸಿತು.

13 ವರ್ಷದ ಒಳಗಿನವರ ವಿಭಾಗದಲ್ಲಿ ಮೊದಲು ಬ್ಯಾಟ್ ಮಾಡಿದ ಡಿಪಿಎಸ್‌ 19  ಓವರ್‌ಗಳಲ್ಲಿ 123 ರನ್  ಗಳಿಸಿ ಆಲೌಟ್‌ ಆಯಿತು. ಆದರೆ ಲಯನ್ಸ್ ತಂಡ ನಿಗಿದಿತ 20 ಓವರ್‌ಗಳು ಪೂರ್ಣಗೊಂಡಾಗ ಏಳು ವಿಕೆಟ್ ಕಳೆದುಕೊಂಡು 111 ರನ್ ಗಳಿಸಲಷ್ಟೇ ಶಕ್ತವಾಯಿತು.

15 ವರ್ಷದ ಒಳಗಿನವರ ವಿಭಾಗದಲ್ಲಿ ನಡೆದ ಪಂದ್ಯದಲ್ಲಿ ಆರ್‌ಎಕ್ಸ್‌ಸಿಎ ತಂಡ ಕೆಐಒಸಿ ‘ಬಿ’ ವಿರುದ್ಧ ಒಂಬತ್ತು ರನ್‌ಗಳಿಂದ ಸೋಲು ಕಂಡಿತು.
11 ವರ್ಷದ ಒಳಗಿನವರ ವಿಭಾಗದಲ್ಲಿ ಪ್ರಸ್ಟೀಜ್‌ ಓಜೋನ್‌ ತಂಡ  ಜೆಎಸಿಎ ರೈನ್ಹೋಸ್‌ ವಿರುದ್ಧದ ಪಂದ್ಯದಲ್ಲಿ ಎಂಟು ವಿಕೆಟ್‌ಗಳಿಂದ ಸೋಲು ಅನುಭವಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.