ADVERTISEMENT

ಡ್ರಾ ಪಂದ್ಯದಲ್ಲಿ ಬಿಎಫ್‌ಸಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 19:30 IST
Last Updated 18 ಫೆಬ್ರುವರಿ 2017, 19:30 IST
ಮುಂಬೈನಲ್ಲಿ ಶನಿವಾರ ನಡೆದ ಐ ಲೀಗ್ ಪಂದ್ಯದಲ್ಲಿ ಬಿಎಫ್‌ಸಿ ಮತ್ತು ಮುಂಬೈ ತಂಡಗಳ ಆಟಗಾರರು ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಯತ್ನಿಸಿದರು.
ಮುಂಬೈನಲ್ಲಿ ಶನಿವಾರ ನಡೆದ ಐ ಲೀಗ್ ಪಂದ್ಯದಲ್ಲಿ ಬಿಎಫ್‌ಸಿ ಮತ್ತು ಮುಂಬೈ ತಂಡಗಳ ಆಟಗಾರರು ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಯತ್ನಿಸಿದರು.   

ಮುಂಬೈ: ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ಮತ್ತು ಮುಂಬೈ ಫುಟ್‌ಬಾಲ್ ಕ್ಲಬ್ ನಡುವಣ ಶನಿವಾರ ನಡೆದ ಪಂದ್ಯವು ಡ್ರಾದಲ್ಲಿ ಮುಕ್ತಾಯವಾಗಿದೆ.

ಐಲೀಗ್ ಟೂರ್ನಿಯಲ್ಲಿ  ನಡೆದ ಪಂದ್ಯದಲ್ಲಿ ಉಭಯ ತಂಡಗಳು ತುರುಸಿನ ಹಣಾಹಣಿ ನಡೆಸಿದವು. ಆದರೆ, ಎರಡೂ ತಂಡಗಳ ಆಟಗಾರರು ಗೋಲು ಗಳಿಸುವಲ್ಲಿ ವಿಫಲರಾದರು.

ಐಲೀಗ್ ಟೂರ್ನಿಯಲ್ಲಿ ಬಿಎಫ್‌ ತಂಡವು ಇದುವರೆಗೆ ಒಂಬತ್ತು ಪಂದ್ಯಗಳನ್ನು ಆಡಿದೆ. ಅದರಲ್ಲಿ ಮೊದಲ ಮೂರು ಪಂದ್ಯಗಳಲ್ಲಿ ಗೆದ್ದ ತಂಡವು ನಂತರದ ಎರಡರಲ್ಲಿ ಸೋತಿತ್ತು. ಕಳೆದ ನಾಲ್ಕು ಪಂದ್ಯಗಳು ಡ್ರಾ ಆಗಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.