ADVERTISEMENT

ನಡಾಲ್‌ ‘ಸಾವಿರ’ದ ಸರದಾರ

ಏಜೆನ್ಸೀಸ್
Published 27 ಮಾರ್ಚ್ 2017, 19:30 IST
Last Updated 27 ಮಾರ್ಚ್ 2017, 19:30 IST
ನಡಾಲ್‌ ‘ಸಾವಿರ’ದ  ಸರದಾರ
ನಡಾಲ್‌ ‘ಸಾವಿರ’ದ ಸರದಾರ   

ಮಿಯಾಮಿ: ಸ್ಪೇನ್‌ನ ಆಟಗಾರ ರಫೆಲ್‌ ನಡಾಲ್‌ ಅವರು ಭಾನುವಾರ ವೃತ್ತಿ ಬದುಕಿನ 1000ನೇ ಟೆನಿಸ್‌  ಪಂದ್ಯವನ್ನು ಆಡಿದ ಸಾಧನೆಗೆ ಭಾಜನರಾದರು.

ಇಲ್ಲಿ ನಡೆಯುತ್ತಿರುವ ಮಿಯಾಮಿ ಓಪನ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಅವರು ಜರ್ಮನಿಯ ಫಿಲಿಪ್‌ ಕೊಹ್ಲ್‌ಶ್ರಿಬರ್‌ ಅವರನ್ನು ಮಣಿಸಿ ಈ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು.

ಭಾನುವಾರ ನಡೆದ ಪಂದ್ಯದಲ್ಲಿ ನಡಾಲ್‌ 0–6, 6–2, 6–3ರಲ್ಲಿ ಫಿಲಿಪ್‌ ಸವಾಲು ಮೀರಿನಿಂತು ನಾಲ್ಕನೇ ಸುತ್ತಿಗೆ ಲಗ್ಗೆ ಇಟ್ಟರು.

ADVERTISEMENT

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರುವ ‘ರಫಾ’ ಎಟಿಪಿ ಟೂರ್‌ ನಲ್ಲಿ ಗೆದ್ದ 822ನೇ ಪಂದ್ಯ ಇದಾಗಿದೆ.

ಮೊದಲ ಸೆಟ್‌ನಲ್ಲಿ ನಡಾಲ್‌ ಅವರಿಂದ ನಿರೀಕ್ಷಿತ ಆಟ ಮೂಡಿ ಬರಲಿಲ್ಲ. ಶರವೇಗದ ಸರ್ವ್‌ಗಳನ್ನು  ಮಾಡಿದ ಫಿಲಿಪ್‌ ತಮ್ಮ ಸರ್ವ್ ಕಾಪಾಡಿಕೊಳ್ಳುವ ಜೊತೆಗೆ ಮೂರು ಬಾರಿ ನಡಾಲ್‌ ಸರ್ವ್‌ ಮುರಿದು ಏಕಪಕ್ಷೀಯವಾಗಿ ಸೆಟ್‌ ಗೆದ್ದರು.

ಇದರಿಂದ ಸ್ಪೇನ್‌ನ ಆಟಗಾರ ಎದೆಗುಂದಲಿಲ್ಲ. ಎರಡು ಮತ್ತು ಮೂರನೇ ಸೆಟ್‌ಗಳಲ್ಲಿ ಆಕರ್ಷಕ ಆಟ ಆಡಿದ ಅವರು ಗೆಲುವು ಒಲಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.