ADVERTISEMENT

ನಾಳೆಯಿಂದ ವಿವಿಧ ಕಾರ್ಯಕ್ರಮ

ಕರ್ನಾಟಕದಲ್ಲಿ ಗಾಂಧಿ ಮೊದಲ ಹೆಜ್ಜೆ, ಶತಮಾನೋತ್ಸವ

​ಪ್ರಜಾವಾಣಿ ವಾರ್ತೆ
Published 6 ಮೇ 2015, 20:31 IST
Last Updated 6 ಮೇ 2015, 20:31 IST

ಬೆಂಗಳೂರು: ಮಹಾತ್ಮ ಗಾಂಧಿ ಕರ್ನಾಟಕಕ್ಕೆ ನೀಡಿದ ಮೊದಲ ಭೇಟಿಯ ಶತಮಾನೋತ್ಸವ ಆಚರಣೆಯನ್ನು ಶುಕ್ರವಾರ   ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಯುವಜನ ಸಬಲೀಕರಣ ಮತ್ತು ವಾರ್ತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ನಾಗಾಂಬಿಕಾ ದೇವಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾಹಿತಿ ಡಿ.ವಿ.ಗುಂಡಪ್ಪ ಅವರ ಕೋರಿಕೆ ಮೇರೆಗೆ ಗಾಂಧಿ 1915ರ ಮೇ 8ರಂದು ರಾಜ್ಯಕ್ಕೆ ಮೊದಲ ಭೇಟಿ ನೀಡಿದರು. ಅದನ್ನು ಸ್ಮರಿಸಿಕೊಳ್ಳುವ ಮೂಲಕ ಗಾಂಧಿಯವರ ವಿಚಾರಗಳು ಮತ್ತು ಆದರ್ಶಗಳನ್ನು ಜನ ಸಾಮಾನ್ಯ ರಿಗೆ ವಿಶೇಷವಾಗಿ ಯುವ ಜನರಿಗೆ ತಲು ಪಿಸುವ ಸಲುವಾಗಿ ಈ  ಕಾರ್ಯಕ್ರಮ ವನ್ನು ಏರ್ಪಡಿಸ ಲಾಗಿದೆ’ ಎಂದರು.

‘ಮೇ 8ರಂದು ಬೆಳಿಗ್ಗೆ 9ಕ್ಕೆ ರೈಲು ನಿಲ್ದಾಣದಿಂದ ಪಾದಯಾತ್ರೆ, ಗಾಂಧಿ ಭವನದಲ್ಲಿ ಚಿತ್ರ ಪ್ರದರ್ಶನ, ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಭಜನೆ ಮತ್ತು ಸಾರ್ವಜನಿಕ ಸಮಾರಂಭ ಆಯೋಜಿಸ ಲಾಗಿದೆ. ಅದೇ ಕಾರ್ಯ ಕ್ರಮದಲ್ಲಿ ವಾರ್ತಾ ಇಲಾಖೆ ಹೊರ ತಂದಿರುವ ಕರ್ನಾಟಕದಲ್ಲಿ ಗಾಂಧಿ ಎಂಬ ವಿಶೇಷ ಪ್ರಕಟಣೆ ಮತ್ತು ಅಂಚೆ ಲಕೋಟೆ ಬಿಡುಗಡೆ ಮಾಡಲಾಗುವುದು’ ಎಂದು ಅವರು ಹೇಳಿದರು.

‘ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಗಾಂಧಿ ಮೊದಲ ಹೆಜ್ಜೆ ಶತಮಾನೋತ್ಸವ ಕಾರ್ಯಕ್ರಮ ನಡೆಸಲಾಗುವುದು. ಶತಮಾನೋತ್ಸವ ಆಚರಣೆಯು ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತ ವಾಗುವುದಿಲ್ಲ. ಒಂದು ವರ್ಷ ಕಾಲ ಶಾಲಾ ಕಾಲೇಜುಗಳಲ್ಲಿ  ಗಾಂಧಿ ಸಾಹಿತ್ಯದ ಅಧ್ಯಯನ, ವಿವಿಧ ಸ್ಪರ್ಧೆ, ಶಿಬಿರ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕೋರಲಾಗಿದೆ’ ಎಂದು ಅವರು ನುಡಿದರು.

ಗಾಂಧಿ ಸ್ಮಾರಕ ನಿಧಿ, ವಾರ್ತಾ  ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಯುವಜನ ಸಬಲೀಕರಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ ಮೊದಲಾದ ಸಂಸ್ಥೆಗಳ ಸಹಯೋಗ ದಲ್ಲಿ ಶತಮಾನೋತ್ಸವ ವನ್ನು ಆಚರಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ಗಾಂಧಿ ರಾಜ್ಯ ಭೇಟಿಯ ವೈಶಿಷ್ಟ್ಯಗಳು: ‘ಮಹಾತ್ಮ ಗಾಂಧಿ ರಾಜ್ಯಕ್ಕೆ ಒಟ್ಟು 18 ಬಾರಿ ಭೇಟಿ ನೀಡಿದ್ದರು. ಅವರು ಕಾಂಗ್ರೆಸ್‌ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದು ಒಮ್ಮೆ ಮಾತ್ರ; ಅದು ಬೆಳಗಾವಿಯಲ್ಲಿ 1924ರಲ್ಲಿ  ನಡೆದ ಅಧಿವೇಶನದಲ್ಲಿ ಎಂಬುದು ಹೆಮ್ಮೆಯ ಮತ್ತು ಸ್ಮರಣೀಯ ಸಂಗತಿ’ ಎಂದು ನಾಗಾಂಬಿಕಾ ದೇವಿ ಹೇಳಿದರು.

‘ದೇಶದ ವಿವಿಧ ಆಶ್ರಮಗಳಲ್ಲಿನ ವಾಸ್ತವ್ಯ ಹೊರತು ಪಡಿಸಿದರೆ ಗಾಂಧಿಯವರು ಅತಿ ಹೆಚ್ಚು ಕಾಲ ತಂಗಿದ್ದು ಕರ್ನಾಟಕದಲ್ಲಿ.  ನಂದಿ ಬೆಟ್ಟದಲ್ಲಿ ಪ್ರಕೃತಿ ಚಿಕಿತ್ಸೆಗಾಗಿ 45 ದಿವಸಗಳ ಕಾಲ ವಾಸ್ತವ್ಯ ಹೂಡಿದ್ದರು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.