ADVERTISEMENT

ನ್ಯೂಜಿಲೆಂಡ್ ವಿರುದ್ಧದ ಅಭ್ಯಾಸ ಪಂದ್ಯಕ್ಕೆ ಯುವರಾಜ್, ರೋಹಿತ್ ಶರ್ಮಾ ಅಲಭ್ಯ

ಏಜೆನ್ಸೀಸ್
Published 28 ಮೇ 2017, 5:35 IST
Last Updated 28 ಮೇ 2017, 5:35 IST
ಯುವರಾಜ್ ಸಿಂಗ್ (ಸಾಂದರ್ಭಿಕ ಚಿತ್ರ)
ಯುವರಾಜ್ ಸಿಂಗ್ (ಸಾಂದರ್ಭಿಕ ಚಿತ್ರ)   

ನವದೆಹಲಿ: ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್‌ ಜತೆ ಸೆಣಸಲಿದ್ದು, ಈ ಪಂದ್ಯಕ್ಕೆ ಯುವರಾಜ್ ಸಿಂಗ್ ಮತ್ತು ರೋಹಿತ್ ಶರ್ಮಾ ಅಲಭ್ಯರಾಗಿದ್ದಾರೆ.

ಯುವರಾಜ್‌ ಸಿಂಗ್ ಅವರು ಜ್ವರದಿಂದ ಬಳಲುತ್ತಿದ್ದರೆ, ರೋಹಿತ್ ಶರ್ಮಾ ಅವರು ಇನ್ನಷ್ಟೇ ತಂಡವನ್ನು ಸೇರಿಕೊಳ್ಳಬೇಕಿದೆ. ಯುವರಾಜ್ ಅವರು ಜ್ವರದಿಂದ ಬಳಲುತ್ತಿರುವುದನ್ನು ಬಿಸಿಸಿಐನ ವೈದ್ಯಕೀಯ ತಂಡ ದೃಢಪಡಿಸಿದೆ. ‘ಅವರಿಗೆ ಗಂಭೀರ ಆರೋಗ್ಯ ಸಮಸ್ಯೆಗಳಿಲ್ಲ. ಗುಣಮುಖರಾಗುತ್ತಿದ್ದಾರೆ’ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.

‘ಮೊದಲ ಅಭ್ಯಾಸ ಪಂದ್ಯದಿಂದ ಹೊರಗುಳಿದು ವಿಶ್ರಾಂತಿ ಪಡೆಯುವಂತೆ ಯುವರಾಜ್‌ ಅವರಿಗೆ ಸೂಚಿಸಲಾಗಿದೆ. ಅವರು ಶೀಘ್ರ ಗುಣಮುಖರಾಗುವಂತೆ ಮಾಡಲು ವೈದ್ಯರ ತಂಡ ಶ್ರಮಿಸಲಿದೆ’ ಎಂದು ಬಿಸಿಸಿಐ ತಿಳಿಸಿದೆ.

ADVERTISEMENT

ರೋಹಿತ್‌ ಶರ್ಮಾ ಅವರು ಸಂಬಂಧಿಕರ ವಿವಾಹ ಸಮಾರಂಭದ ನಿಮಿತ್ತ ತಂಡದಿಂದ ಹೊರಗುಳಿಯಲು ಮನವಿ ಮಾಡಿದ್ದರು. ಶೀಘ್ರ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದೂ ಬಿಸಿಸಿಐ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.