ADVERTISEMENT

ಪರದಾಡಿದ ಮುಂಬೈಗೆ ಆದಿತ್ಯ ಆಸರೆ

ತಿಮ್ಮಪ್ಪಯ್ಯ ಸ್ಮಾರಕ ಆಹ್ವಾನಿತ ಕ್ರಿಕೆಟ್ ಟೂರ್ನಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2016, 19:30 IST
Last Updated 28 ಜುಲೈ 2016, 19:30 IST
ಬೇಗನೆ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಮುಂಬೈ ತಂಡಕ್ಕೆ ಆದಿತ್ಯ ತಾರೆ ಆಸರೆಯಾದರು. ಅವರ ಬ್ಯಾಟಿಂಗ್ ವೈಖರಿ
ಬೇಗನೆ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಮುಂಬೈ ತಂಡಕ್ಕೆ ಆದಿತ್ಯ ತಾರೆ ಆಸರೆಯಾದರು. ಅವರ ಬ್ಯಾಟಿಂಗ್ ವೈಖರಿ   

ಬೆಂಗಳೂರು: ಆದಿತ್ಯ ತಾರೆ ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದಾಗಿ ಮುಂಬೈ ತಂಡ ಕೆ. ತಿಮ್ಮಪ್ಪಯ್ಯ ಸ್ಮಾರಕ ಆಹ್ವಾನಿತ ಕ್ರಿಕೆಟ್ ಟೂರ್ನಿಯ ತನ್ನ ಎರಡನೇ ಲೀಗ್ ಪಂದ್ಯದಲ್ಲಿ ಆಂಧ್ರ ವಿರುದ್ಧ  ಉತ್ತಮ ಮೊತ್ತಗಳಿಸುವ ಹಾದಿಯಲ್ಲಿ ಸಾಗಿದೆ.

ಮೈಸೂರಿನಲ್ಲಿ ಗುರುವಾರ ಆರಂಭ ವಾದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಮುಂಬೈ ತಂಡ ಮೊದಲ ದಿನದಾಟದ ಅಂತ್ಯಕ್ಕೆ 87.5 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 267 ರನ್ ಕಲೆ ಹಾಕಿತ್ತು.

ಜಸ್ಟ್ ಕ್ರಿಕೆಟ್‌ ಮೈದಾನದಲ್ಲಿ ಆಯೋಜನೆಯಾಗಿರುವ ಕೆಎಸ್‌ಸಿಎ ಇಲೆವೆನ್‌ ಮತ್ತು ಒಡಿಶಾ ತಂಡಗಳ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು.  ವರುಣದ ಕಾಟದಿಂದಲೇ ಕೆಎಸ್‌ಸಿಎ ಕೋಲ್ಟ್ಸ್‌ ಮತ್ತು ಕೇರಳ ತಂಡಗಳ ನಡುವಿನ ಪಂದ್ಯ ಕೂಡ ಆರಂಭವಾಗಲಿಲ್ಲ. ಈ ಪಂದ್ಯ ಆದಿತ್ಯ ಗ್ಲೋಬಲ್‌ ಮೈದಾನದಲ್ಲಿ ನಡೆಯಲಿದೆ.

ಸಂಕ್ಷಿಪ್ತ ಸ್ಕೋರು: ಶ್ರೀಕಂಠದತ್ತ ನರಸಿಂಹರಾಜ್‌ ಒಡೆಯರ್‌ ಮೈದಾನ: ಮುಂಬೈ 87.5 ಓವರ್‌ಗಳಲ್ಲಿ 7 ವಿಕೆಟ್‌ಗೆ 267 (ಅಖಿಲ್‌ ಹೆರ್ವಾಡ್ಕರ್‌ 39, ಸ್ವಪ್ನಿಲ್ ಪ್ರಧಾನ್‌ 27, ಸೂರ್ಯಕುಮಾರ್ ಯಾದವ್ 37, ಆದಿತ್ಯ ತಾರೆ ಬ್ಯಾಟಿಂಗ್  98, ಸಿದ್ದೇಶ್‌ ಲಾಡ್‌ 26; ಬಿ. ಸಿದ್ದಾರ್ಥ್‌ 3ಕ್ಕೆ60, ಭಾರ್ಗವ್‌ ಭಟ್‌ 2ಕ್ಕೆ110). ಆಂಧ್ರ ವಿರುದ್ಧದ ಪಂದ್ಯ.

ಜೆಸಿಇ ಮೈದಾನ: ಗುಜರಾತ್‌ 84.1 ಓವರ್‌ಗಳಲ್ಲಿ 7 ವಿಕೆಟ್‌ಗೆ 263 (ಸಮಿತ್‌ ಗೊಹಿಲ್‌ 69,  ರುಜುಲ್ ಭಟ್‌ ಬ್ಯಾಟಿಂಗ್‌ 102, ಕರಣ್ ಪಟೇಲ್‌ 55; ಸಿದ್ದಾರ್ಥ್‌ ಕೌಲ್‌ 2ಕ್ಕೆ40). ಪಂಜಾಬ್‌ ವಿರುದ್ಧ ಪಂದ್ಯ.

ಆಲೂರು ಒಂದನೇ ಮೈದಾನ: ಡಿ.ವೈ. ಪಾಟೀಲ್‌ ಅಕಾಡೆಮಿ 55 ಓವರ್‌ಗಳಲ್ಲಿ 3 ವಿಕೆಟ್‌ಗೆ 161 (ಎ. ವಿಕ್ರಮ್ ಬ್ಯಾಟಿಂಗ್ 45, ಕೆವಿನ್‌ ಅಲ್ಮೆದಿಯಾ ಬ್ಯಾಟಿಂಗ್ 90; ಮುಖೇಶ್ ಕುಮಾರ್ 2ಕ್ಕೆ30). ಬಂಗಾಳ ವಿರುದ್ಧದ ಪಂದ್ಯ.

ಆಲೂರು ಎರಡನೇ ಮೈದಾನ: ತ್ರಿಪುರ 68 ಓವರ್‌ಗಳಲ್ಲಿ 7 ವಿಕೆಟ್‌ಗೆ 188 (ಉದಿಯನ್‌ ಬೋಸ್‌ 31, ರಾಜೀವ್ ದೇ 76, ಯಶ್ಪಾಲ್‌ ಶರ್ಮಾ 49, ನಿರುಪಮ್‌ ಸೇನ್‌ ಬ್ಯಾಟಿಂಗ್ 19,  ಗುರೀಂದರ್ ಸಿಂಗ್ 28; ಗುರ್ವಿಂದರ್‌ ಸಿಂಗ್ 2ಕ್ಕೆ36). ಹಿಮಾಚಲ ಪ್ರದೇಶ ಎದುರಿನ ಪಂದ್ಯ.

ಐಎಎಫ್‌ ಮೈದಾನ: ಕೆಎಸ್‌ಸಿಎ ಅಧ್ಯಕ್ಷರ ಇಲೆವೆನ್‌ 40  ಓವರ್‌ಗಳಲ್ಲಿ 4 ವಿಕೆಟ್‌ಗೆ 99 (ಮೀರ್ ಕೌನೇನ್‌ ಅಬ್ಬಾಸ್‌ 43, ಲಿಯಾನ್ ಖಾನ್‌   ಬ್ಯಾಟಿಂಗ್ 25; ಯಜುವೇಂದ್ರ ಚಾಹಲ್ 3ಕ್ಕೆ36). ಹರಿಯಾಣ ವಿರುದ್ಧದ ಪಂದ್ಯ.

ಬಿಜಿಎಸ್‌ ಮೈದಾನ: ವಿದರ್ಭ ಕ್ರಿಕೆಟ್‌ ಸಂಸ್ಥೆ 35 ಓವರ್‌ಗಳಲ್ಲಿ ವಿಕೆಟ್ ನಷ್ಟವಿ ಲ್ಲದೆ 95 (ಅಮಿತ್‌ ಪುಣೆಕರ್‌ ಬ್ಯಾಟಿಂಗ್ 58). ಬರೋಡ ವಿರುದ್ಧದ ಪಂದ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.