ADVERTISEMENT

ಭಾರತಕ್ಕೆ 92 ರನ್‌ ಗೆಲುವು

ಭಾರತ–ವಿಂಡೀಸ್‌ ಪ್ರಥಮ ಟೆಸ್ಟ್‌

​ಪ್ರಜಾವಾಣಿ ವಾರ್ತೆ
Published 24 ಜುಲೈ 2016, 20:27 IST
Last Updated 24 ಜುಲೈ 2016, 20:27 IST
ಭಾರತಕ್ಕೆ 92 ರನ್‌ ಗೆಲುವು
ಭಾರತಕ್ಕೆ 92 ರನ್‌ ಗೆಲುವು   

ನಾರ್ಥ್‌ ಸೌಂಡ್, ಆ್ಯಂಟಿಗ (ಪಿಟಿಐ): ಭಾರತ ಮತ್ತು ವೆಸ್ಟ್‌ ಇಂಡೀಸ್‌ ನಡುವಣ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ 92 ರನ್‌ಗಳ ಗೆಲುವು ಸಾಧಿಸಿದೆ. 

ಸರ್‌ ವಿವಿಯನ್‌ ರಿಚರ್ಡ್‌ ಕ್ರೀಡಾಂಗಣದಲ್ಲಿ ನಡೆದ  ಪಂದ್ಯದಲ್ಲಿ ಆತಿಥೇಯ ವಿಂಡೀಸ್‌ ತಂಡ ಮೊದಲ ಇನಿಂಗ್ಸ್‌ನಲ್ಲಿ 90.2 ಓವರ್‌ಗಳಲ್ಲಿ  243 ರನ್‌ಗಳಿಗೆ ಆಲೌಟ್‌ ಆಯಿತು.

ಫಾಲೋ ಆನ್‌ ಪಡೆದು ದ್ವಿತೀಯ ಇನಿಂಗ್ಸ್‌ ಆರಂಭಿದ ಜಾಸನ್‌ ಹೋಲ್ಡರ್‌ ಸಾರಥ್ಯದ ತಂಡ 78 ಓವರ್‌ಗಳಲ್ಲಿ 10 ವಿಕೆಟ್‌ಗೆ 231ರನ್‌ ಗಳಿಸಿತು.  ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 161.5 ಓವರ್‌ಗಳಲ್ಲಿ 8 ವಿಕೆಟ್‌ಗೆ 566ರನ್‌ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತ್ತು.

ADVERTISEMENT

ಭಾರತದ ಪರ ಆರ್.ಅಶ್ವಿನ್ 83ಕ್ಕೆ 7 ವಿಕೆಟ್ ಪಡೆದು ಮಿಂಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.