ADVERTISEMENT

ಪ್ರಶಸ್ತಿಗಾಗಿ ರುತ್‌–ರಮ್ಯಾ ಪೈಪೋಟಿ

ರಾಜ್ಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ರಘು ಜಯದ ಓಟ

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 19:30 IST
Last Updated 21 ಜುಲೈ 2017, 19:30 IST
ಬಳ್ಳಾರಿಯಲ್ಲಿ ನಡೆಯುತ್ತಿರುವ ರಾಜ್ಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಸಿಂಗಲ್ಸ್‌ನಲ್ಲಿ ಫೈನಲ್‌ ಪ್ರವೇಶಿಸಿದ ರುತ್‌ ಮಿಶಾ ಆಟದ ವೈಖರಿ.
ಬಳ್ಳಾರಿಯಲ್ಲಿ ನಡೆಯುತ್ತಿರುವ ರಾಜ್ಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಸಿಂಗಲ್ಸ್‌ನಲ್ಲಿ ಫೈನಲ್‌ ಪ್ರವೇಶಿಸಿದ ರುತ್‌ ಮಿಶಾ ಆಟದ ವೈಖರಿ.   

ಬಳ್ಳಾರಿ: ಗೆಲುವಿನ ಓಟ ಮುಂದುವರಿಸಿರುವ ಅಗ್ರ ಶ್ರೇಯಾಂಕದ ಆಟಗಾರ್ತಿ ವಿ. ರುತ್‌ ಮಿಶಾ ಮತ್ತು ಸಿ.ವಿ. ರಮ್ಯಾ ಅವರು ಇಲ್ಲಿ ನಡೆಯುತ್ತಿರುವ ರಾಜ್ಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಸೆಮಿಫೈನಲ್‌ ಪಂದ್ಯದಲ್ಲಿ ಮಿಶಾ 21–12, 21–23, 21–15ರಲ್ಲಿ ಜಿ. ಜಯಶ್ರೀ ಅವರನ್ನು ಮಣಿಸಿದರೆ, ರಮ್ಯಾ 21–15, 21–15ರಲ್ಲಿ ಎರಡನೇ ಶ್ರೇಯಾಂಕದ ಆರ್‌.ಎನ್‌. ಸವಿತಾ ಎದುರು ಜಯ ಪಡೆದರು.

ಸೆಮಿಗೆ ರಘು, ನಿಖಿಲ್‌: ಪುರುಷರ ಸಿಂಗಲ್ಸ್‌ ಹೋರಾಟದ ಕ್ವಾರ್ಟರ್‌ ಫೈನಲ್‌ನಲ್ಲಿ ರಘು ಮರಿಸ್ವಾಮಿ ಮತ್ತು ನಿಖಿಲ್‌ಶ್ಯಾಮ್‌ ಶ್ರೀರಾಮ್‌ ಜಯ ಪಡೆದರು.

ADVERTISEMENT

ಅಗ್ರಶ್ರೇಯಾಂಕದ ರಘು 21–19, 21–18ರಲ್ಲಿ ಬೆಂಗಳೂರಿನ ವೈಟ್‌ಪಿಕಾಕ್‌ ಬ್ಯಾಡ್ಮಿಂಟನ್ ಅಕಾಡೆಮಿಯ ಮಯೂರೇಶ್‌ ಜನಪಂಡಿತ್‌ ಮೇಲೂ, ಇದೇ ಅಕಾಡೆಮಿಯ ನಿಖಿಲ್‌ 21–12, 11–21, 21–13ರಲ್ಲಿ ಬಿ. ಅಭಿಲಾಷ್‌ ವಿರುದ್ಧವೂ ಗೆಲುವು ಸಾಧಿಸಿದರು.

ಇದೇ ವಿಭಾಗದ ಇನ್ನೆರೆಡು ಪಂದ್ಯಗಳಲ್ಲಿ ಎಂ.ಜಿ. ಹೇಮಂತ್‌ 21–15, 21–10ರಲ್ಲಿ ಬಿ. ಕಿರಣ್‌ ಮೇಲೂ, ಡ್ಯಾನಿಯಲ್‌ ಎಸ್‌. ಫರೀದ್‌ 21–6, 21–11ರಲ್ಲಿ ರಾಮೇಶ್ವರ ಮಹಾಪಾತ್ರ ವಿರುದ್ಧವೂ ಜಯ ಸಾಧಿಸಿ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟರು.

ಬಾಲಕರ 19 ವರ್ಷದ ಒಳಗಿನವರ ವಿಭಾಗದಲ್ಲಿ ಅಗ್ರಶ್ರೇಯಾಂಕದ ಬಿ. ಕಿರಣ್‌ 21–12, 21–11ರಲ್ಲಿ ನಿಹಾಲ್‌ ನಾಯ್ಕ ಅವರನ್ನು ಮಣಿಸಿದರು.

ಇದೇ ವಿಭಾಗದ ಇನ್ನಷ್ಟು ಪಂದ್ಯಗಳಲ್ಲಿ ಕೆ. ಸಾಯಿಪ್ರತೀಕ್‌ 17–21, 21–17, 21–15ರಲ್ಲಿ ಕೆ. ಶಮಂತ ರಾವ್‌ ಮೇಲೂ, ಮೈಸೂರಿನ ರಾಮ್‌ ಬ್ಯಾಡ್ಮಿಂಟನ್‌ ಅಕಾಡೆಮಿಯ ಎಂ. ರೋಹಿತ್‌ 21–16, 21–12ರಲ್ಲಿ ಗಣೇಶ್‌ ವಿ., ವಿರುದ್ಧವೂ, ಎರಡನೇ ಶ್ರೇಯಾಂಕದ ನಿಖಿಲ್‌ಶ್ಯಾಮ್‌ ಶ್ರೀರಾಮ್‌ 21–10, 21–15ರಲ್ಲಿ ಅಬಿ ಎಸ್‌. ಅಮುಧನ್‌ ಮೇಲೂ ಜಯ ಪಡೆದರು.

ಫೈನಲ್‌ಗೆ ಧೃತಿ: ಬಾಲಕಿಯರ 19 ವರ್ಷದ ಒಳಗಿನವರ ವಿಭಾಗದಲ್ಲಿ ಧೃತಿ ಯತೀಶ್ 21–13, 21–10ರಲ್ಲಿ ಎನ್‌. ಎಸ್‌. ಪ್ರೇರಣಾ ಮೇಲೂ, ನಾಲ್ಕನೇ ಶ್ರೇಯಾಂಕದ ತ್ರಿಷಾ ಹೆಗ್ಡೆ 21–13, 21–8ರಲ್ಲಿ ಸಿ.ವಿ. ರಮ್ಯಾ ವಿರುದ್ಧವೂ ಜಯ ಸಾಧಿಸಿ ಫೈನಲ್ ಪ್ರವೇಶಿಸಿದರು.

19 ವರ್ಷದ ಒಳಗಿನವರ ಬಾಲಕಿಯರ ಡಬಲ್ಸ್‌ನಲ್ಲಿ ಕೀರ್ತನಾ ಪಿ. ಶ್ರಾಫ್‌ ಹಾಗೂ ಮೇಧಾ ಶಶಿಧರನ್‌ ಅವರು ಫೈನಲ್‌ ತಲುಪಿದರು. ಈ ಜೋಡಿ 9–21, 21–15, 21–11ರಲ್ಲಿ ಧರಣಿ ರವಿಕುಮಾರ್‌ ಹಾಗೂ ರಂಜಿನಿ ಹೆಗ್ಡೆ ಅವರನ್ನು ಮಣಿಸಿತು. ಇನ್ನೊಂದು ಪಂದ್ಯದಲ್ಲಿ ಪ್ರಕಾಶ್‌ ಪಡುಕೋಣೆ ಅಕಾಡೆಮಿಯ ಧೃತಿ ಯತೀಶ್‌–ತೃಷಾ ಹೆಗ್ಡೆ 21–16, 21–9ರಲ್ಲಿ ಟಾಮ್ಸ್‌ ಅಕಾಡೆಮಿಯ ಅಂಚಲ್‌ ಧವನ್‌, ಡಿ.ವೈ.ಇ.ಎಸ್‌.ನ ದೀತ್ಯಾ ಅವರನ್ನು ಪರಾಭವಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.