ADVERTISEMENT

ಫುಟ್‌ಸಾಲ್‌: ಬೆಂಗಳೂರು ರಾಯಲ್ಸ್‌ಗೆ ಸೋಲು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2017, 20:07 IST
Last Updated 23 ಸೆಪ್ಟೆಂಬರ್ 2017, 20:07 IST

ಬೆಂಗಳೂರು: ತವರಿನ ಅಭಿಮಾನಿಗಳ ಎದುರು ದಿಟ್ಟ ಆಟ ಆಡಲು ವಿಫಲವಾದ ಬೆಂಗಳೂರು ರಾಯಲ್ಸ್‌ ತಂಡ ಪ್ರೀಮಿಯರ್‌ ಫುಟ್‌ಸಾಲ್‌ ಲೀಗ್‌ ಎರಡನೇ ಆವೃತ್ತಿಯ ಪಂದ್ಯದಲ್ಲಿ ಸೋಲು ಕಂಡಿದೆ.

ಕೋರಮಂಗಲ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಹೋರಾಟದಲ್ಲಿ ತೆಲುಗು ಟೈಗರ್ಸ್‌ 3–2 ಗೋಲುಗಳಿಂದ ರಾಯಲ್ಸ್‌ ತಂಡವನ್ನು ಮಣಿಸಿತು.

ವಿಜಯಿ ತಂಡದ ಲೂಯಿಸ್‌ ಗೊಂಜಾಲೆಸ್‌ 15 ಮತ್ತು 20ನೇ ನಿಮಿಷಗಳಲ್ಲಿ ಗೋಲು ಗಳಿಸಿದರು. ಅನುಪಮ್‌ ವಿಶ್ವಕರ್ಮ 23ನೇ ನಿಮಿಷದಲ್ಲಿ ಗೋಲು ತಂದಿತ್ತು ಮುನ್ನಡೆ ಹೆಚ್ಚಿಸಿದರು. ಬೆಂಗಳೂರು ತಂಡದ ಜೊನಾಥನ್‌ ಡಿ ಸಿಲ್ವ ಎರಡು ಗೋಲು ದಾಖಲಿಸಿದರು.

ADVERTISEMENT

ದಿನದ ಇನ್ನೊಂದು ಪಂದ್ಯದಲ್ಲಿ ಚೆನ್ನೈ ಸಿಂಗಮ್ಸ್‌ 5–4 ಗೋಲುಗಳಿಂದ ಕೇರಳ ಕೋಬ್ರಾಸ್‌ ವಿರುದ್ಧ ಗೆದ್ದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.