ADVERTISEMENT

ಬಾಂಗ್ಲಾದ ಸಾಧಾರಣ ಮೊತ್ತ

ಕ್ರಿಕೆಟ್‌: ಡೇಲ್‌ ಸ್ಟೇಯ್ನ್ 400 ವಿಕೆಟ್ ಸಾಧನೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2015, 19:34 IST
Last Updated 30 ಜುಲೈ 2015, 19:34 IST

ಢಾಕಾ (ಎಎಫ್‌ಪಿ): ಮುಷ್ಫೀಕರ್ ರಹೀಮ್ ಮತ್ತು ಮಹಮುದುಲ್ಲಾ  ಅವರ ನೆರವಿನಿಂದ ಬಾಂಗ್ಲಾ ತಂಡವು ಗುರುವಾರ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭವಾದ  ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಸಾಧಾರಣ ಮೊತ್ತ ಗಳಿಸಿತು.

ಟೆಸ್ಟ್‌ ಕ್ರಿಕೆಟ್‌ನಲ್ಲಿ 400 ವಿಕೆಟ್‌ ಗಳಿಸಿದ ಸಾಧನೆ ಮಾಡಿದ ದಕ್ಷಿಣ ಆಫ್ರಿಕಾ ತಂಡದ ವೇಗಿ ಡೇಲ್ ಸ್ಟೇಯ್ನ್  ಬಿರು ಗಾಳಿಗೆ ಬಾಂಗ್ಲಾ ತಂಡವು ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತ್ತು. 

ನಾಯಕ ರಹೀಮ್‌ (65ರನ್) ಮತ್ತು ಮಹಮುದುಲ್ಲಾ (35) ಅವರ ನೆರವಿ ನಿಂದ ದಿನದಾಟದ ಕೊನೆಗೆ 88.1 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 246 ರನ್ ಗಳಿಸಿದೆ. ಇನಿಂಗ್ಸ್‌ನ ಐದನೇ ಓವರ್‌ನಲ್ಲಿ ಡೆಲ್ ಸ್ಟೇಯ್ನ್ ಅವರ ಸ್ವಿಂಗ್‌ ಎಸೆತವನ್ನು ತಡವಿದ ತಮೀಮ್ ಇಕ್ಬಾಲ್ ಹಾಶೀಂ ಆಮ್ಲಾಗೆ ಕ್ಯಾಚ್ ಆದರು.  ಇದರೊಂದಿಗೆ ಸ್ಟೇಯ್ನ್‌ 400 ವಿಕೆಟ್‌ ಗಳಿಸಿದ ಬೌಲರ್‌ ಗಳ ಕ್ಲಬ್‌ನಲ್ಲಿ ಸ್ಥಾನ ಪಡೆದರು.

80 ಪಂದ್ಯಗಳಲ್ಲಿ 400 ವಿಕೆಟ್ ಗಡಿ ದಾಟಿದರು. ಅತಿ ವೇಗದಲ್ಲಿ ಈ ಸಾಧನೆ ಮಾಡಿದ ನ್ಯೂಜಿಲೆಂಡ್‌ನ ಮಾಜಿ ಆಟಗಾರ ಸರ್‌ ರಿಚರ್ಡ್‌ ಹ್ಯಾಡ್ಲಿ ಅವರೊಂದಿಗೆ ಎರಡನೇ ಸ್ಥಾನ ಹಂಚಿ ಕೊಂಡರು. ಮುತ್ತಯ್ಯ ಮುರಳೀಧ ರನ್ ಮೊದಲ ಸ್ಥಾನದಲ್ಲಿದ್ದಾರೆ.

ನಂತರ ಕ್ರೀಸ್‌ನಲ್ಲಿದ್ದ ಇಮ್ರುಲ್ ಕಯೆಸ್ (30ರನ್) ಜೊತೆಗೂಡಿದ ಮೊಮಿನುಲ್ ಹಕ್ (40ರನ್) ಎರಡನೆ ವಿಕೆಟ್‌ ಜೊತೆಯಾಟದಲ್ಲಿ 69 ರನ್ ಸೇರಿಸಿ  ಇನಿಂಗ್ಸ್‌ ಕಟ್ಟುವ ಯತ್ನ ಮಾಡಿದರು.  ಈ ಜತೆಯಾಟವನ್ನು ಆಫ್‌ಸ್ಪಿನ್ನರ್  ಜೆ.ಪಿ. ಡುಮಿನಿ ಮುರಿದರು. 32ನೇ ಓವರ್‌ನಲ್ಲಿ ಮೊಮಿನುಲ್ ಹಕ್ ಮತ್ತು 34ನೇ ಓವರ್‌ನಲ್ಲಿ ಇಮ್ರುಲ್ ಅವರ ವಿಕೆಟ್‌ಗಳನ್ನು ಗಳಿಸಿದರು. 

ನಂತರ ನಾಲ್ಕನೇ ವಿಕೆಟ್ ಪಾಲು ದಾರಿಕೆಯಲ್ಲಿ ನಾಯಕ ಮುಷ್ಫೀಕರ್ ರಹೀಂ ಮತ್ತು ಮಹಮುದುಲ್ಲಾ 94 ರನ್ ಸೇರಿಸಿದರು.  ಇದರಿಂದ ತಂಡವು ಅಲ್ಪಮೊತ್ತಕ್ಕೆ ಕುಸಿಯುವ ಅಪಾಯದಿಂದ ಪಾರಾ ಯಿತು.  ಮತ್ತೆ ದಾಳಿಗಿಳಿದ ಡೆಲ್ ಸ್ಟೇಯ್ನ್ ಈ ಜತೆಯಾಟವನ್ನು ಮುರಿದರು. ಮಹಮುದುಲ್ಲಾ ಅವರನ್ನು ಪೆವಿಲಿಯನ್‌ಗೆ ಕಳಿಸಿದರು. 

ಸಂಕ್ಷಿಪ್ತ ಸ್ಕೋರು: ಬಾಂಗ್ಲಾ :  88.1 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 246 (ಇಮ್ರುಲ್ ಕಯೆಸ್ 30, ಮೊಮಿನುಲ್ ಹಕ್ 40, ಮೊಹಮ್ಮದುಲ್ಲಾ 35, ಮುಷ್ಫೀ ಕರ್ ರಹೀಮ್ 65, ಶಕೀಬ್ ಅಲ್ ಹಸನ್ 35,  ಡೇಲ್ ಸ್ಟೇಯ್ನ್ 30ಕ್ಕೆ3, ಡೀನ್ ಎಲ್ಗರ್ 22ಕ್ಕೆ1, ಜೆ.ಪಿ. ಡುಮಿನಿ 27ಕ್ಕೆ3)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.