ADVERTISEMENT

ಬಾಂಗ್ಲಾ ಪತ್ರಿಕೆಯಲ್ಲಿ ಭಾರತದ ಆಟಗಾರರಿಗೆ ಅವಮಾನ

​ಪ್ರಜಾವಾಣಿ ವಾರ್ತೆ
Published 30 ಜೂನ್ 2015, 20:04 IST
Last Updated 30 ಜೂನ್ 2015, 20:04 IST

ಢಾಕಾ (ಪಿಟಿಐ): ಬಾಂಗ್ಲಾದೇಶದ ದಿನಪತ್ರಿಕೆಯೊಂದು ಭಾರತೀಯ ಕ್ರಿಕೆಟ್ ಆಟಗಾರರ ಅರ್ಧ ತಲೆಬೋಳಿಸಿರುವ ಅಣಕು ಚಿತ್ರವನ್ನು ಪ್ರಕಟಿಸುವ ಮೂಲಕ ತೀವ್ರವಾಗಿ ಟೀಕಿಸಿದ್ದು, ವಿವಾದ ಸೃಷ್ಟಿಸಿದೆ.

ಇಲ್ಲಿನ ‘ಪ್ರೋಥಮ್‌ ಅಲ್‌’ ಪತ್ರಿಕೆಯು ಬಾಂಗ್ಲಾ ಕ್ರಿಕೆಟ್‌ನ ಯುವ ಬೌಲರ್‌ ಮುಸ್ತಫಿಜುರ್‌ ಅವರನ್ನು ಶ್ಲಾಘಿಸಿದೆ.  ಆದರೆ ಅದೇ ಭರದಲ್ಲಿ  ಭಾರತೀಯ ಆಟಗಾರರನ್ನು ಅವಮಾನಿ ಸುವ   ರೀತಿಯಲ್ಲಿ ಜಾಹೀರಾತು ಚಿತ್ರವನ್ನು ವಿನ್ಯಾಸಗೊಳಿಸಿ ಪ್ರಕಟಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯಾಗುತ್ತಿದ್ದು ಪತ್ರಿಕೆಯ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಈ ಜಾಹೀರಾತಿನ ಬಗ್ಗೆ ಇಲ್ಲಿಯವರೆಗೂ ಬಿಸಿಸಿಐ ಹಾಗೂ ಹಿರಿಯ ಕ್ರಿಕೆಟ್‌ ಆಟಗಾರರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.