ಬೆಂಗಳೂರು: ಆಟಗಾರನ ಜೊತೆ ಪದೇ ಪದೇ ಮಾತಿನ ಚಕಮಕಿ ನಡೆಸಿದ ಕಾರಣಕ್ಕಾಗಿ ಮುಂಬೈ ಇಂಡಿಯನ್ಸ್ ತಂಡದ ಕೀರನ್ ಪೊಲಾರ್ಡ್ ಅಂಪೈರ್ ಕೆಂಗಣ್ಣಿಗೆ ಗುರಿಯಾಗಬೇಕಾಯಿತು.
ಆದ್ದರಿಂದ ಪೊಲಾರ್ಡ್ ಅವರಿಗೆ ‘ಬಾಯಿ ಮುಚ್ಚಿಕೊಂಡು ಫೀಲ್ಡಿಂಗ್ ಮಾಡಿ’ ಎಂದು ಫೀಲ್ಡ್ ಅಂಪೈರ್ ಸೂಚಿಸಿದರು. ಈ ಕಾರಣಕ್ಕಾಗಿ ಅವರು ಡಗ್ಔಟ್ ಬಳಿ ಹೋಗಿ ಬಾಯಿಗೆ ಪಟ್ಟಿ ಹಾಕಿಕೊಂಡು ಬಂದರು. ಪಂದ್ಯದ ವೇಳೆ ಪೊಲಾರ್ಡ್ ಅವರು ಕ್ರಿಸ್ ಗೇಲ್ ಜೊತೆ ಮಾತಿನ ಚಕಮಕಿ ನಡೆಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.