ADVERTISEMENT

ಬಿಸಿಸಿಐಗೆ ಶಾ ರಾಜೀನಾಮೆ

ಪಿಟಿಐ
Published 18 ಫೆಬ್ರುವರಿ 2017, 19:30 IST
Last Updated 18 ಫೆಬ್ರುವರಿ 2017, 19:30 IST
ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಾಣಿಜ್ಯ ವ್ಯವಹಾrಗಳ ವಿಭಾಗದ ಮುಖ್ಯ ವ್ಯವಸ್ಥಾಪಕ ಆರ್. ಪಿ ಶಾ ಅವರು ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 
 
ಬಿಸಿಸಿಐನ ಮೂವರು ಮುಖ್ಯ ವ್ಯವಸ್ಥಾಪಕರಲ್ಲಿ ಶಾ ಅವರೂ ಒಬ್ಬರಾಗಿದ್ದರು. 
 
‘ನನಗೆ ಈಗ 61 ವರ್ಷ ವಯಸ್ಸು ಮತ್ತು ಪುಣೆಯಲ್ಲಿ ವಾಸವಾಗಿದ್ದೇನೆ. ಆದ್ದರಿಂದ ಮುಂಬೈಗೆ ಬಂದು ಕಾರ್ಯನಿರ್ವಹಿಸುವುದು ಕಷ್ಟಕರ ವಾಗಿದೆ. ಆದ್ದರಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಕಳೆದ ಅಕ್ಟೋಬರ್‌ನಲ್ಲಿಯೇ ರಾಜೀನಾಮೆ ಇಂಗಿತವನ್ನು ವ್ಯಕ್ತಪಡಿಸಿದ್ದೆ. ಇದುವರೆಗೆ ಉತ್ತಮ ಕಾರ್ಯ ನಿರ್ವಹಿಸಿದ್ದೇನೆ. ಬಿಸಿಸಿಐ ಪದಾಧಿಕಾರಿಗಳು ಮತ್ತು ಸಿಇಒ ಜೊತೆಗೆ ಉತ್ತಮ ವೃತ್ತಿಬಾಂಧವ್ಯ ಹೊಂದಿದ್ದೆ’ ಎಂದು ಶಾ ತಿಳಿಸಿದ್ದಾರೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.