ADVERTISEMENT

ಬೆಂಗಳೂರಿನಲ್ಲಿ ಗಾಲ್ಫ್ ಕಲಿಕಾ ಸಪ್ತಾಹ

ದೇಶದ ಐದು ಗಾಲ್ಫ್‌ ಸಂಸ್ಥೆಗಳ ಸಹಯೋಗ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 19:30 IST
Last Updated 22 ಸೆಪ್ಟೆಂಬರ್ 2017, 19:30 IST
ರಾಜ್ಯ ಗಾಲ್ಫ್ ಸಂಸ್ಥೆಯ ಅಂಗಳ ಪ್ರಜಾವಾಣಿ ಚಿತ್ರ
ರಾಜ್ಯ ಗಾಲ್ಫ್ ಸಂಸ್ಥೆಯ ಅಂಗಳ ಪ್ರಜಾವಾಣಿ ಚಿತ್ರ   

ಬೆಂಗಳೂರು: ಗಾಲ್ಫ್‌ ಆಡಲು ಬಯಸುವ ವರಿಗಾಗಿ ಸೆ. 25ರಿಂದ ಗಾಲ್ಫ್ ಕಲಿಕಾ ಸಪ್ತಾಹ (ಇಂಡಿಯನ್ ಲರ್ನ್ ಗಾಲ್ಫ್ ವೀಕ್‌) ಆರಂಭವಾಗಲಿದೆ. ನಗರದ ನಾಲ್ಕು ಗಾಲ್ಫ್ ಕ್ಪಬ್‌ ಗಳಲ್ಲಿ ಅಕ್ಟೋಬರ್‌ 1ರವರೆಗೆ ತರಬೇತಿ ಕಾರ್ಯಕ್ರಮ ನಡೆಯಲಿದೆ.

ಗಾಲ್ಫ್‌ ಇಂಡಸ್ಟ್ರಿ ಅಸೋಸಿಯೇಷನ್‌ (ಜಿಐಎ) ಆಯೋಜಿಸಿರುವ ಈ ವಿಶೇಷ ಯೋಜನೆಗೆ ಇಂಡಿಯನ್ ಗಾಲ್ಫ್ ಯೂನಿಯನ್‌ (ಐಜಿಯು), ದಿ ವಿಮೆನ್ಸ್ ಗಾಲ್ಫ್‌ ಅಸೋಸಿಯೇಷನ್ (ಡಬ್ಲ್ಯುಜಿಎಎಐ) ದಿ ನ್ಯಾಷನಲ್ ಗಾಲ್ಫ್ ಅಸೋ ಸಿಯೇಷನ್‌ (ಎನ್‌ಜಿಎಐ), ಗಾಲ್ಫ್ ಕ್ಲಬ್‌ ಸೂಪರಿಂಟೆಂಡೆಂಟ್ಸ್‌ ಅಂಡ್‌ ಮ್ಯಾನೇ ಜರ್ಸ್ ಅಸೋಸಿಯೇಷನ್‌ (ಜಿಸಿಎಸ್‌–ಎಂಎಐ) ಹಾಗೂ ಪ್ರೊಫೆಷನಲ್‌ ಗಾಲ್ಫರ್ಸ್‌ ಅಸೋಸಿಯೇಷನ್‌ (ಪಿಜಿಎ) ಸಹಯೋಗವಿದೆ.

ದೇಶದ ಒಟ್ಟು 16 ನಗರಗಳ 28 ಕ್ಲಬ್‌ಗಳಲ್ಲಿ ಕಾರ್ಯಕ್ರಮ ನಡೆಯಲಿದ್ದು ಬೆಂಗಳೂರಿನಲ್ಲಿ ರಾಜ್ಯ ಗಾಲ್ಫ್ ಸಂಸ್ಥೆ, ಜಿಯಾನ್ ಹಿಲ್ಸ್‌, ಪ್ರೆಸ್ಟಿಜ್ ಗಾಲ್ಫ್‌ಶೈರ್‌ ಮತ್ತು ಈಗಲ್ಟನ್‌ ಗಾಲ್ಫ್‌ ರೆಸಾರ್ಟ್ಸ್‌ನಲ್ಲಿ ತರಬೇತಿ ಸಿಗಲಿದೆ. ಕಡಿಮೆ ಶುಲ್ಕ ಪಡೆದು ಸುಮಾರು 20 ಸಾವಿರ ಮಂದಿಯನ್ನು ಗಾಲ್ಫ್ ಕ್ಷೇತ್ರಕ್ಕೆ ಪರಿಚಯಿಸುವುದು ಯೋಜನೆಯ ಉದ್ದೇಶ ಎಂದು ಸಂಘಟಕರು ತಿಳಿಸಿದ್ದಾರೆ.

ADVERTISEMENT

‘ಗಾಲ್ಫ್ ಎಲ್ಲರಿಗೂ ಕೈಗೆಟಕುವ ಕ್ರೀಡೆ. ಇದಕ್ಕೆ ಬಳಸುವ ವಸ್ತುಗಳು ಸುಲ ಭವಾಗಿ ಸಿಗುತ್ತವೆ’ ಎಂದು ಜಿಯಾನ್‌ ಹಿಲ್ಸ್‌ನಲ್ಲಿ ತರಬೇತಿ ನೀಡಲಿರುವ ಪೃಥ್ವಿರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ನೋಂದಣಿಗೆ www.totalgolfhub.com/events/ilgw ಗೆ ಲಾಗ್ ಆಗಬಹುದು ಎಂದು ಸಂಘಟಕರು ತಿಳಿಸಿದ್ದಾರೆ.

*


ಹೊಸ ಪ್ರತಿಭೆಗಳಿಗೆ ಅವಕಾಶ
ಇಂಡಿಯನ್ ಲರ್ನ್ ಗಾಲ್ಫ್ ವೀಕ್‌ ಯೋಜನೆ ಹೊಸ ಪ್ರತಿಭೆಗಳ ಬೆಳವಣಿಗೆಗೆ ಉತ್ತಮ ಅವಕಾಶ ಒದಗಿಸಲಿದೆ. ಗಾಲ್ಫ್ ಬಗ್ಗೆ ಆಸಕ್ತಿ ಇದ್ದು ಕಲಿಯಲು ವಿವಿಧ ಕಾರಣಗಳಿಂದ ಹಿಂದೇಟು ಹಾಕುವವರು ಸಾಕಷ್ಟು ಮಂದಿ ಇದ್ದಾರೆ. ಅವರಿಗೆ ಇಲ್ಲಿ ಸುಲಭವಾಗಿ ತರಬೇತಿ ಸಿಗಲಿದೆ. ಆಸಕ್ತರೆಲ್ಲರಿಗೂ ಇಲ್ಲಿ ಕಲಿಯಲು ಅವಕಾಶವಿದೆ. ಬೆಂಗಳೂರಿನಲ್ಲಿ ಯೋಜನೆಗೆ ಅತ್ಯುತ್ತಮ ಬೆಂಬಲ ಸಿಗುವ ಭರವಸೆ ಇದೆ.
–ಪೃಥ್ವಿರಾಜ್,ತರಬೇತುದಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.