ADVERTISEMENT

ಬೋಲ್ಟ್ ಇರುವಿಕೆ ಒತ್ತಡ ತಂದಿಲ್ಲ: ಧರ್ಮವೀರ್

​ಪ್ರಜಾವಾಣಿ ವಾರ್ತೆ
Published 20 ಜುಲೈ 2016, 19:30 IST
Last Updated 20 ಜುಲೈ 2016, 19:30 IST

ನವದೆಹಲಿ (ಪಿಟಿಐ):‘ಉಸೇನ್ ಬೋಲ್ಟ್‌ ಅವರನ್ನು ನಾನು ಒಬ್ಬ ಪ್ರತಿಸ್ಪರ್ಧಿಯನ್ನಾಗಿ ಮಾತ್ರ ಭಾವಿಸುತ್ತೇನೆ.  ಅವರ ಇರುವಿಕೆ ನನಗೆ ಒತ್ತಡ ತಂದಿಲ್ಲ. ನನ್ನ ಸಿದ್ಧತೆ ಮೇಲೆ ನಾನು ಗಮನ ಹರಿಸಿದ್ದೇನೆ’ ಎಂದು ಭಾರತದ 200 ಮೀಟರ್ಸ್ ಓಟದ ಸ್ಪರ್ಧಿ ಧರ್ಮವೀರ್ ಸಿಂಗ್ ಹೇಳಿದ್ದಾರೆ.

ಒಲಿಂಪಿಕ್ಸ್‌ನ ಪುರುಷರ 200 ಮೀಟರ್ಸ್ ಓಟಕ್ಕೆ 36 ವರ್ಷಗಳ ನಂತರ ಭಾರತದಿಂದ ಆಯ್ಕೆಯಾದ ಅಥ್ಲೀಟ್ ಬುಧವಾರ ಸುದ್ದಿಸಂಸ್ಥೆಯ ಪ್ರತಿನಿಧಿಯೊಂದಿಗೆ ಮಾತನಾಡಿದರು.

‘ನಾನು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವುದು ಯಾವುದೇ ರೀತಿಯ ಅಚ್ಚರಿಯಲ್ಲ. ನನಗೆ ಆ ಸಾಮರ್ಥ್ಯ ಇತ್ತು.   200 ಮೀಟರ್ಸ್ ಓಟದಲ್ಲಿ 20 ಸೆಕೆಂಡುಗಳ ಸಾಧನೆಯನ್ನು ನಾನು ಮೀರಿ ನಿಲ್ಲಬಲ್ಲೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಸತತ ಎಂಟು ವರ್ಷಗಳಿಂದ ನಾನು ಕಠಿಣವಾದ ಅಭ್ಯಾಸ ಮಾಡಿದ್ದೇನೆ. ಅದರ ಫಲ ಈಗ ಸಿಗುತ್ತಿದೆ. ನನ್ನ ಗುರಿ ಬಗ್ಗೆ ಸ್ಪಷ್ಟತೆ ಇದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.