ADVERTISEMENT

ಬ್ಯಾಸ್ಕೆಟ್‌ಬಾಲ್‌: ಮೈಸೂರು ತಂಡಕ್ಕೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2014, 19:30 IST
Last Updated 25 ನವೆಂಬರ್ 2014, 19:30 IST
ಬೆಂಗಳೂರಿನಲ್ಲಿ ನಡೆದ ರಾಜ್ಯ ಅಸೋಸಿಯೇಷನ್‌ ಕಪ್‌ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ ಮಂಗಳವಾರ ಪ್ರಶಸ್ತಿ ಗೆದ್ದ ಮೈಸೂರಿನ ಡಿವೈಎಸ್‌ಎಸ್‌ ತಂಡದ ಆಟಗಾರ್ತಿಯರು ಟ್ರೋಫಿಯೊಂದಿಗೆ (ನಿಂತವರು, ಎಡದಿಂದ) ರಂಜಿತಾ, ಅನಿತಾ, ದೇಚಮ್ಮಾ, ಬಿ.ಎಸ್‌ ಗಿರೀಶ್‌ (ಕೋಚ್‌), ನವನೀತಾ, ಸುನಿತಾ ಮತ್ತು ಕವನಾ, (ಕುಳಿತವರು, ಎಡದಿಂದ) ಆರ್‌. ಗೊಮೇದಾ, ಸುಪ್ರಿಯಾ, ಅಪೂರ್ವಾ ಮತ್ತು ಸಿಂಚನಾ 	–ಪ್ರಜಾವಾಣಿ ಚಿತ್ರ

ಬೆಂಗಳೂರು: ನವನೀತಾ ಮತ್ತು ಕವನಾ ಅವರ ಸಮರ್ಥ ಆಟದ ನೆರವಿನಿಂದ ಮೈಸೂರಿನ ಕ್ರೀಡಾ ಹಾಸ್ಟೆಲ್‌ ತಂಡ ರಾಜ್ಯ ಬ್ಯಾಸ್ಕೆಟ್‌ಬಾಲ್‌ ಸಂಸ್ಥೆ ಆಶ್ರಯದಲ್ಲಿ ನಡೆದ ರಾಜ್ಯ ಅಸೋಸಿಯೇಷನ್‌ ಕಪ್‌ ಚಾಂಪಿಯನ್‌ಷಿಪ್‌ನ ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿ ಜಯಿಸಿತು.

ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಫೈನಲ್‌ ಹಣಾಹಣಿಯಲ್ಲಿ ಕ್ರೀಡಾ ಹಾಸ್ಟೆಲ್‌  64–62ರಲ್ಲಿ ಮೌಂಟ್ಸ್‌ ಕ್ಲಬ್‌ ತಂಡವನ್ನು ಮಣಿಸಿತು.

ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ವಿಜಯೀ ತಂಡದ ನವನೀತಾ ಮತ್ತು ಕವನಾ ತಲಾ 18 ಪಾಯಿಂಟ್ಸ್‌ ಗಳಿಸಿ ಮಿಂಚಿದರು.

ವಿಜಯ ಬ್ಯಾಂಕ್‌ ಚಾಂಪಿಯನ್‌: ಪುರುಷರ ವಿಭಾಗದ ಫೈನಲ್‌ನಲ್ಲಿ ವಿಜಯ ಬ್ಯಾಂಕ್‌ 75–58ರಲ್ಲಿ ಯಂಗ್‌ ಓರಿಯನ್ಸ್‌ ತಂಡವನ್ನು ಮಣಿಸಿ ಚಾಂಪಿಯನ್‌ ಆಯಿತು.

ಮೂರನೇ ಸ್ಥಾನಕ್ಕಾಗಿ ನಡೆದ ಪುರುಷರ ವಿಭಾಗದ ಪಂದ್ಯದಲ್ಲಿ ಸಿಎಂಪಿ 51–43ರಲ್ಲಿ ಕ್ರೀಡಾ ಹಾಸ್ಟೆಲ್‌ ಎದುರೂ, ಮಹಿಳಾ ವಿಭಾಗದಲ್ಲಿ ಬೀಗಲ್ಸ್‌ ಬಿ.ಸಿ 36–15 ರಲ್ಲಿ ಸಿಜೆಸಿ ಮೇಲೂ ಜಯ ಸಾಧಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT