ADVERTISEMENT

ಭಾರತಕ್ಕೆ ಫಿಫಾ ತಂಡ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2016, 19:48 IST
Last Updated 10 ಫೆಬ್ರುವರಿ 2016, 19:48 IST

ನವದೆಹಲಿ (ಪಿಟಿಐ): ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ 17 ವರ್ಷದ ಒಳಗಿನವರ ವಿಶ್ವಕಪ್‌ ಟೂರ್ನಿಗೆ ನಡೆದಿರುವ ಸಿದ್ಧತೆಗಳನ್ನು ವೀಕ್ಷಿಸಲು ಫೆ. 14ರಿಂದ 20ರ ಒಳಗೆ ಫಿಫಾ ತಂಡ ಬರಲಿದೆ.

ಈ ತಂಡ ಆರು ನಗರಗಳಲ್ಲಿ ಕ್ರೀಡಾಂಗಣಗಳ ಸಿದ್ಧತೆಯನ್ನು ಪರಿಶೀಲಿಸಲಿದೆ. ಭಾರತ ವಿಶ್ವಕಪ್‌ ಟೂರ್ನಿಗೆ ಆತಿಥ್ಯದ ಅವಕಾಶವನ್ನು 2013ರಲ್ಲಿ ಪಡೆದುಕೊಂಡಿತ್ತು. ಟೂರ್ನಿಗೆ ಆತಿಥ್ಯ ವಹಿಸುತ್ತಿರುವುದು ಇದು ಮೊದಲು.

ಫಿಫಾ ತಂಡ ಕೊಚ್ಚಿ (ಫೆ. 15), ಗೋವಾ (16), ಮುಂಬೈ (17), ಕೋಲ್ಕತ್ತ (18), ಗುವಾಹಟಿ (19) ಮತ್ತು ದೆಹಲಿ (20) ಕ್ರೀಡಾಂಗಣಗಳಲ್ಲಿ
ಪರಿಶೀಲನೆ ನಡೆಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.