ADVERTISEMENT

ಭಾರತ ಕ್ರಿಕೆಟ್‌ ಆಟಗಾರರ ಬ್ಯುಸಿನೆಸ್‌ ಕ್ಲಾಸ್‌ ವಿಮಾನ ಸೇವೆ ಬೇಡಿಕೆಗೆ ಬಿಸಿಸಿಐ ಒಪ್ಪಿಗೆ

ಏಜೆನ್ಸೀಸ್
Published 13 ನವೆಂಬರ್ 2017, 14:26 IST
Last Updated 13 ನವೆಂಬರ್ 2017, 14:26 IST
ಭಾರತ ಕ್ರಿಕೆಟ್‌ ಆಟಗಾರರ ಬ್ಯುಸಿನೆಸ್‌ ಕ್ಲಾಸ್‌ ವಿಮಾನ ಸೇವೆ ಬೇಡಿಕೆಗೆ ಬಿಸಿಸಿಐ ಒಪ್ಪಿಗೆ
ಭಾರತ ಕ್ರಿಕೆಟ್‌ ಆಟಗಾರರ ಬ್ಯುಸಿನೆಸ್‌ ಕ್ಲಾಸ್‌ ವಿಮಾನ ಸೇವೆ ಬೇಡಿಕೆಗೆ ಬಿಸಿಸಿಐ ಒಪ್ಪಿಗೆ   

ನವದೆಹಲಿ: ಬ್ಯುಸಿನೆಸ್‌ ಕ್ಲಾಸ್‌ ವಿಮಾನ ಸೇವೆ ಒದಗಿಸುವಂತೆ ಭಾರತ ಕ್ರಿಕೆಟ್‌ ತಂಡದ ಆಟಗಾರರು ಸಲ್ಲಿಸಿದ ಮನವಿಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಒಪ್ಪಿಗೆ ಸೂಚಿಸಿದೆ. 

ಆಟಗಾರರು ಸಾಮಾನ್ಯ ಕ್ಲಾಸ್‌ನಲ್ಲಿ ಪ್ರಯಾಣಿಸುವ ವೇಳೆ ಅಭಿಮಾನಿಗಳಿಂದ ತೊಂದರೆ ಅನುಭವಿಸುತ್ತಿದ್ದರು. ಈ ಕುರಿತು ನಾಯಕ ವಿರಾಟ್‌ ಕೊಹ್ಲಿ ಸೇರಿದಂತೆ ಇತರ ಆಟಗಾರರು ಬಿಸಿಸಿಐಗೆ ದೂರು ಸಲ್ಲಿಸಿದ್ದರು.

ಸುಪ್ರೀಂ ಕೋರ್ಟ್‌ ನೇಮಿಸಿರುವ ನಿರ್ಣಾಯಕ ಸಮಿತಿ (ಸಿಒಎ) ಸೋಮವಾರ ನಡೆಸಿದ ಸಭೆಯಲ್ಲಿ ಬ್ಯುಸಿನೆಸ್‌ ಕ್ಲಾಸ್‌ ವಿಮಾನ ಸೇವೆ ಕುರಿತಾದ ಬೇಡಿಕೆಗೆ ಒಪ್ಪಿಗೆ ಸೂಚಿಸಿದೆ.

ADVERTISEMENT

‘ಸದ್ಯ ಬಿಸಿಸಿಐನ ಆದಾಯ ಉತ್ತಮವಾಗಿದೆ. ಹೀಗಾಗಿ ಸ್ವಂತ ವಿಮಾನ ಖರೀದಿಸಿ ಅದರಲ್ಲೇ ಆಟಗಾರರನ್ನು ಒಂದು ದೇಶದಿಂದ ಮತ್ತೊಂದು ದೇಶದಲ್ಲಿ ನಡೆಯುವ ಪಂದ್ಯಗಳಿಗೆ ಕರೆದುಕೊಂಡು ಹೋಗುವುದರಿಂದ ಅವರಿಗೆ ಆಗುವ ಆಯಾಸ ಕಡಿಮೆ ಮಾಡಬಹುದು’ ಎಂದು ಹಿರಿಯ ಕ್ರಿಕೆಟಿಗ ಕಪಿಲ್‌ ದೇವ್‌ ಅಭಿಪ್ರಾಯಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.