ADVERTISEMENT

ಭಾರತ ತಂಡದ ಅಭ್ಯಾಸ ಆರಂಭ

ಪಿಟಿಐ
Published 23 ನವೆಂಬರ್ 2017, 19:30 IST
Last Updated 23 ನವೆಂಬರ್ 2017, 19:30 IST
ಶೊರ್ಡ್ ಮ್ಯಾರಿಜ್‌
ಶೊರ್ಡ್ ಮ್ಯಾರಿಜ್‌   

ಭುವನೇಶ್ವರ: ಮುಂದಿನ ತಿಂಗಳ ಒಂದರಿಂದ ಇಲ್ಲಿ ನಡೆಯಲಿರುವ ವಿಶ್ವ ಹಾಕಿ ಲೀಗ್ ಫೈನಲ್‌ನಲ್ಲಿ ಆಡಲಿರುವ ಭಾರತ ತಂಡದವರು ಗುರುವಾರ ಅಭ್ಯಾಸ ಆರಂಭಿಸಿದರು.

ಈ ಹಂತದಲ್ಲಿ ಆಟಗಾರರು ವೇಗ ಮತ್ತು ತಂತ್ರಗಳನ್ನು ಮೈಗೂಡಿಸಿಕೊಳ್ಳುವುದಕ್ಕೆ ಹೆಚ್ಚು ಮಹತ್ವ ನೀಡಿದರು. ಕೋಚ್‌ ಶೊರ್ಡ್ ಮ್ಯಾರಿಜ್ ಅವರ ಮಾರ್ಗದರ್ಶನದಲ್ಲಿ ಪಳಗಿರುವ ತಂಡ ಒಂದು ತಾಸು ದೈಹಿಕ ಕಸರತ್ತು ನಡೆಸಿದ ನಂತರ ಅರ್ಧ ತಾಸು  ಪಂದ್ಯವೊಂದನ್ನು ಆಡಿದರು.

‘ಬಿ’ ಗುಂಪಿನಲ್ಲಿರುವ ಭಾರತ ಡಿಸೆಂಬರ್ ಒಂದರಂದು ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾವನ್ನು ಎದುರಿಸಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.