ADVERTISEMENT

ಭಾರತ ಪುರುಷರ ತಂಡಕ್ಕೆ ಚಿನ್ನ

ದಕ್ಷಿಣ ಏಷ್ಯಾ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2015, 19:30 IST
Last Updated 3 ಆಗಸ್ಟ್ 2015, 19:30 IST

ಕೊಲಂಬೊ (ಐಎಎನ್ಎಸ್‌): ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಚುರುಕಿನ ಆಟವಾಡಿದ ಭಾರತದ ಪುರುಷರ ಬ್ಯಾಸ್ಕೆಟ್‌ಬಾಲ್‌ ತಂಡ (3X3) ಇಲ್ಲಿ ನಡೆದ ದಕ್ಷಿಣ ಏಷ್ಯಾ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಬಂಗಾರದ ಸಾಧನೆ ಮಾಡಿದೆ.

ಭಾನುವಾರ ರಾತ್ರಿ ನಡೆದ ಫೈನಲ್‌ನಲ್ಲಿ ಭಾರತ 21–10 ಪಾಯಿಂಟ್ಸ್‌ನಿಂದ ಆತಿಥೇಯ ಶ್ರೀಲಂಕಾ ತಂಡವನ್ನು ಮಣಿಸಿತು. ಶನಿವಾರ ನಡೆದ ಉಭಯ ತಂಡಗಳ ನಡುವಿನ ಲೀಗ್‌ ಪಂದ್ಯದಲ್ಲಿ  ಭಾರತ ಸೋಲು ಕಂಡಿತ್ತು. ಮಹತ್ವದ ಪಂದ್ಯದಲ್ಲಿ ಗೆಲ್ಲುವ ಮೂಲಕ ಲೀಗ್‌ನಲ್ಲಿ ಅನುಭವಿಸಿದ್ದ ಸೋಲಿಗೂ ಭಾರತ ತಿರುಗೇಟು ನೀಡಿತು.

ಸೆಮಿಫೈನಲ್‌ಗೆ ಅರ್ಹತೆ ಗಳಿಸ ಬೇಕಾದರೆ ಕೊನೆಯ ಲೀಗ್‌ ಪಂದ್ಯದಲ್ಲಿ ನೇಪಾಳ ಎದುರು ಭಾರತಕ್ಕೆ ಗೆಲುವು ಅನಿವಾರ್ಯವಾಗಿತ್ತು. ಆ ಪಂದ್ಯದಲ್ಲೂ ಭಾರತ 20–10 ಪಾಯಿಂಟ್ಸ್‌ನಿಂದ ಜಯ ಸಾಧಿಸಿತ್ತು.

‘ಭಾರತದ ಕೋಟ್ಯಂತರ ಜನರ ಆಸೆ ಈಡೇರಿಸಲು ಇಲ್ಲಿ ಪದಕ ಜಯಿಸುವುದು ಮುಖ್ಯವಾಗಿತ್ತು.  ನಮ್ಮ ಈ ಸಾಧನೆ ದೇಶದ ಯುವ ಆಟಗಾರರಿಗೆ ಸ್ಫೂರ್ತಿ ಯಾಗಲಿದೆಯೆಂದು ಭಾವಿಸುತ್ತೇನೆ’ ಎಂದು ಭಾರತ ತಂಡದ ಆಟಗಾರ ಸಿದ್ದಾಂತ್‌ ಶಿಂಧೆ ಹೇಳಿದ್ದಾರೆ.  ಶಿಂಧೆ, ಬಾಸಿಲ್‌ ಫಿಲಿಪ್‌, ರಾಜೇಶ್ ಉಪ್ಪಾರ್‌ ಮತ್ತು ಜೀವನನಾಥಮ್‌ ಪಾಂಡಿ ಭಾರತ ತಂಡದ ಸದಸ್ಯರಾಗಿದ್ದರು.

ಈ ಚಾಂಪಿಯನ್‌ಷಿಪ್‌ನಲ್ಲಿ ಪದಕ ಜಯಿಸಿರುವ ಭಾರತ ಆಗಸ್ಟ್‌ 15 ಮತ್ತು 16ರಂದು ಬೀಜಿಂಗ್‌ನಲ್ಲಿ ನಡೆಯಲಿ ರುವ ವಿಶ್ವ 3X3 ಬ್ಯಾಸ್ಕೆಟ್‌ಬಾಲ್ ಚಾಂಪಿ ಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದುಕೊಂಡಿದೆ. ಆಟಗಾರರು ಬೆಂಗ ಳೂರಿನಲ್ಲಿ ಅಭ್ಯಾಸ ಮುಂದುವರಿಸಲಿ ದ್ದಾರೆ. ಹೋದ ವರ್ಷ ಬಾಂಗ್ಲಾ ದೇಶ ದಲ್ಲಿ ನಡೆದಿದ್ದ ಚಾಂಪಿಯನ್‌ ಷಿಪ್‌ನಲ್ಲಿ ಭಾರತ ಪಾಲ್ಗೊಂಡಿರಲಿಲ್ಲ. ಆಗ ಆತಿಥೇಯ ತಂಡ ಚಾಂಪಿಯನ್ ಆಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.