ADVERTISEMENT

ಭಾರತ ಮಹಿಳಾ ತಂಡಕ್ಕೆ ಪ್ರಶಸ್ತಿ

ಸ್ಯಾಫ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌; ಮಿಂಚಿದ ಬಾಲಾ ದೇವಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2014, 19:30 IST
Last Updated 21 ನವೆಂಬರ್ 2014, 19:30 IST

ನವದೆಹಲಿ (ಪಿಟಿಐ): ಬಾಲಾದೇವಿ ಗಳಿಸಿದ ನಾಲ್ಕು ಗೋಲುಗಳ ಬಲದಿಂದ ಭಾರತ ಮಹಿಳಾ ತಂಡ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ  ನಡೆದ ಮೂರನೇ ದಕ್ಷಿಣ ಏಷ್ಯಾ ಫುಟ್‌ಬಾಲ್‌ ಫೆಡರೇಷನ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ಶುಕ್ರವಾರ ನಡೆದ ಫೈನಲ್‌ ಹೋರಾಟದಲ್ಲಿ ಭಾರತ 6–0 ಗೋಲುಗಳಿಂದ ನೇಪಾಳ ತಂಡದ ಎದುರು ಜಯಭೇರಿ ಮೊಳಗಿಸಿತು. ಈ ಮೂಲಕ ಮೂರನೇ ಬಾರಿ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿತು.

ಮಹತ್ವದ ಪಂದ್ಯದಲ್ಲಿ ದಿಟ್ಟ ಹೋರಾಟ ತೋರಿದ ಭಾರತಕ್ಕೆ  25ನೇ ನಿಮಿಷದಲ್ಲಿ ಕಮಲಾ ದೇವಿ ಮುನ್ನಡೆ ಒದಗಿಸಿದರು.
39ಮತ್ತು 40ನೇ ನಿಮಿಷಗಳಲ್ಲಿ ಸತತ ಎರಡು ಬಾರಿ ಚೆಂಡನ್ನು ಗುರಿ ಸೇರಿಸಿದ ಬಾಲಾ ದೇವಿ ಮುನ್ನಡೆಯನ್ನು 3–0ಗೆ ಏರಿಕೆ ಮಾಡಿದರು.

47ನೇ ನಿಮಿಷದಲ್ಲಿ ಪರಮೇಶ್ವರಿ ದೇವಿ ಗೋಲು ಗಳಿಸಿದರೆ, ಸೊಗಸಾದ ಪ್ರದರ್ಶನ ಮುಂದುವರಿಸಿದ ಬಾಲಾದೇವಿ 51 ಮತ್ತು 90+2ನೇ ನಿಮಿಷದಲ್ಲಿ ಗೋಲು ದಾಖಲಿಸಿ  ಭಾರತದ ಪಾಳಯದಲ್ಲಿ ಸಂಭ್ರಮ ಮೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.