ADVERTISEMENT

ಮಹಿಳಾ ಏಕದಿನ ಕ್ರಿಕೆಟ್‌ ಸರಣಿ : ಆಸ್ಟ್ರೇಲಿಯಾ ‘ಕ್ಲೀನ್‌ ಸ್ವೀಪ್‌’ ಸಾಧನೆ

ಅಂತಿಮ ಪಂದ್ಯದಲ್ಲೂ ಭಾರತಕ್ಕೆ ನಿರಾಸೆ

ಪಿಟಿಐ
Published 19 ಮಾರ್ಚ್ 2018, 20:24 IST
Last Updated 19 ಮಾರ್ಚ್ 2018, 20:24 IST
ಭಾರತದ ದೀಪ್ತಿ ಶರ್ಮಾ ಔಟಾದಾಗ ಆಸ್ಟ್ರೇಲಿಯಾದ ಆಟಗಾರ್ತಿಯರು ಖುಷಿಪಟ್ಟರು ಬಿಸಿಸಿಐ ಚಿತ್ರ
ಭಾರತದ ದೀಪ್ತಿ ಶರ್ಮಾ ಔಟಾದಾಗ ಆಸ್ಟ್ರೇಲಿಯಾದ ಆಟಗಾರ್ತಿಯರು ಖುಷಿಪಟ್ಟರು ಬಿಸಿಸಿಐ ಚಿತ್ರ   

ವಡೋದರ: ವಿಕೆಟ್‌ ಕೀಪರ್‌ ಬ್ಯಾಟ್ಸ್‌ವುಮನ್‌ ಅಲಿಸ ಹೀಲಿ (133; 115ಎ, 17ಬೌಂ, 2ಸಿ) ಅವರ ಆಕರ್ಷಕ ಶತಕದ ಬಲದಿಂದ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್‌ ತಂಡ ಮೂರನೇ ಏಕದಿನ ಪಂದ್ಯದಲ್ಲಿ 97ರನ್‌ಗಳಿಂದ ಭಾರತವನ್ನು ಸೋಲಿ ಸಿದೆ. ಇದರೊಂದಿಗೆ ಸರಣಿಯಲ್ಲಿ ‘ಕ್ಲೀನ್‌ ಸ್ವೀಪ್‌’ ಸಾಧನೆ ಮಾಡಿದೆ.

ರಿಲಯನ್ಸ್‌ ಕ್ರೀಡಾಂಗಣದಲ್ಲಿ ಭಾನು ವಾರ ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇ ಲಿಯಾ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 332ರನ್‌ ಕಲೆಹಾಕಿತು.

ನಿಕೊಲ ಬೋಲ್ಟನ್‌ (11) ಮತ್ತು ನಾಯ‌ಕಿ ಲ್ಯಾನಿಂಗ್‌ (18; 14ಎ, 4ಬೌಂ) ಬೇಗನೆ ಔಟಾದರು. ನಂತರ ಹೀಲಿ, ಅಮೋಘ ಆಟ ಆಡಿದರು. ಅವರು ಎಲಿಸೆ ಪೆರಿ (32; 60ಎ, 2ಬೌಂ) ಮತ್ತು ರಚೆಲ್‌ ಹೇನೆಸ್‌ (43; 39ಎ, 5ಬೌಂ) ಅವರೊಂದಿಗೆ ಉತ್ತಮ ಜೊತೆಯಾಟವಾಡಿ ತಂಡವನ್ನು 235ರ ಗಡಿ ದಾಟಿಸಿದರು. ಮಧ್ಯಮ ಕ್ರಮಾಂಕದ ಆಟಗಾರ್ತಿಯರಾದ ಬೆಥ್‌ ಮೂನಿ (ಔಟಾಗದೆ 34; 19ಎ, 5ಬೌಂ) ಮತ್ತು ಆ್ಯಷ್ಲೆಗ್‌ ಗಾರ್ಡನರ್‌ (35; 20ಎ, 6ಬೌಂ) ತಂಡದ ಸವಾಲಿನ ಮೊತ್ತಕ್ಕೆ ಕಾರಣರಾದರು.

ADVERTISEMENT

ಭದ್ರ ಅಡಿಪಾಯ: ಗುರಿ ಬೆನ್ನಟ್ಟಿದ ಭಾರತಕ್ಕೆ ಜೆಮಿಮಾ ರಾಡ್ರಿಗಸ್‌ (42; 41ಎ, 7ಬೌಂ) ಮತ್ತು ಸ್ಮೃತಿ ಮಂದಾನ (52; 42ಎ, 10ಬೌಂ) ಭದ್ರ ಅಡಿಪಾಯ ಹಾಕಿಕೊಟ್ಟರು. ಇವರು ಮೊದಲ ವಿಕೆಟ್‌ಗೆ 101ರನ್‌ ಸೇರಿಸಿದರು. ಈ ಜೋಡಿ ಔಟಾದ ನಂತರ ಬಂದ ಆಟಗಾರ್ತಿಯರು ದೊಡ್ಡ ಮೊತ್ತ ಗಳಿಸಲು ವಿಫಲರಾದರು.

ಸಂಕ್ಷಿಪ್ತ ಸ್ಕೋರ್‌

ಆಸ್ಟ್ರೇಲಿಯಾ: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 332 (ನಿಕೊಲ ಬೋಲ್ಟನ್‌ 11, ಅಲಿಸ ಹೀಲಿ 133, ಮೆಗ್‌ ಲ್ಯಾನಿಂಗ್‌ 18, ಎಲಿಸೆ ಪೆರಿ 32, ರಚೆಲ್‌ ಹೇನೆಸ್‌ 43, ಬೆಥ್ ಮೂನಿ ಔಟಾಗದೆ 34, ಆ್ಯಷ್ಲೆಗ್‌ ಗಾರ್ಡನರ್‌ 35, ನಿಕೊಲ ಕೆರಿ 17; ಹರ್ಮನ್‌ಪ್ರೀತ್‌ ಕೌರ್‌ 51ಕ್ಕೆ2, ಪೂನಮ್‌ ಯಾದವ್‌ 54ಕ್ಕೆ1, ಏಕ್ತಾ ಬಿಷ್ಠ್‌ 38ಕ್ಕೆ1, ದೀಪ್ತಿ ಶರ್ಮಾ 50ಕ್ಕೆ1, ಶಿಖಾ ಪಾಂಡೆ 61ಕ್ಕೆ1)

ಭಾರತ: 44.4 ಓವರ್‌ಗಳಲ್ಲಿ 235 (ಜೆಮಿಮಾ ರಾಡ್ರಿಗಸ್‌ 42, ಸ್ಮೃತಿ ಮಂದಾನ 52, ಮಿಥಾಲಿ ರಾಜ್‌ 21, ಹರ್ಮನ್‌ಪ್ರೀತ್‌ ಕೌರ್‌ 25, ದೀಪ್ತಿ ಶರ್ಮಾ 36, ಸುಷ್ಮಾ ವರ್ಮಾ 30; ಮೇಗನ್‌ ಶುಟ್‌ 54ಕ್ಕೆ2, ಆ್ಯಷ್ಲೆಗ್‌ ಗಾರ್ಡನರ್‌ 40ಕ್ಕೆ3, ಜೆಸ್‌ ಜೊನಾಸನ್‌ 40ಕ್ಕೆ1, ಎಲಿಸೆ ಪೆರಿ 40ಕ್ಕೆ2, ನಿಕೊಲ ಕೆರಿ 34ಕ್ಕೆ1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.