ADVERTISEMENT

ರಿಯೊಗೆ ನಿರ್ಮಲಾ ಅರ್ಹತೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2016, 19:30 IST
Last Updated 1 ಜುಲೈ 2016, 19:30 IST

ಹೈದರಾಬಾದ್‌: ಜಿಎಂಸಿ ಬಾಲಯೋಗಿ ಕ್ರೀಡಾಂಗಣದ ಟ್ರ್ಯಾಕ್‌ನಲ್ಲಿ ಛಲದಿಂದ ಓಡಿದ ಹರಿಯಾಣದ ನಿರ್ಮಲಾ ಶೆರಾನ್‌ ಅವರು ಶುಕ್ರವಾರ 400 ಮೀಟರ್ಸ್ ಓಟದ ವಿಭಾಗಲ್ಲಿ ರಿಯೊಗೆ ರಹದಾರಿ ಪಡೆದಿದ್ದಾರೆ.

ಹರಿಯಾಣದ ಅಥ್ಲೀಟ್‌  ನಿರ್ಮಲಾ ಅವರು 51.48 ಸೆಕೆಂಡುಗಳಲ್ಲಿ ನಿಗದಿತ ದೂರ ಕ್ರಮಿಸಿ ಈ ಸಾಧನೆ ಮಾಡಿದರು. ಅಷ್ಟೇ ಅಲ್ಲದೆ ಈ ವಿಭಾಗದಲ್ಲಿ ನೂತನ ಕೂಟ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು.

ನಿರ್ಮಲಾ ಅವರು ಟ್ರ್ಯಾಕ್‌ ಮತ್ತು ಫೀಲ್ಡ್‌ ವಿಭಾಗದಲ್ಲಿ ರಿಯೊಗೆ ರಹದಾರಿ ಪಡೆದಿರುವ ಭಾರತದ 24ನೇ ಅಥ್ಲೀಟ್‌ ಎನಿಸಿದ್ದಾರೆ.
ಶುಕ್ರವಾರ ಟ್ರ್ಯಾಕ್‌ನಲ್ಲಿ ಬಲ ತುದಿಯಿಂದ ಓಡಿದ ನಿರ್ಮಲ ಅವರು ಆರಂಭದಿಂದಲೇ ಮಿಂಚಿನ ವೇಗ ಕಾಯ್ದುಕೊಂಡರು.  ಈ ಮೂಲಕ ಎದುರಾಳಿಗಳಿಂದ ಸಾಕಷ್ಟು ಅಂತರ ಕಾಯ್ದುಕೊಂಡು ಸಾಗಿದ ಅವರು 51.48 ಸೆಕೆಂಡುಗಳಲ್ಲಿ ಗುರಿ ಮುಟ್ಟುವಲ್ಲಿ ಯಶಸ್ವಿಯಾದರು. 

ಈ ಮೂಲಕ ಕರ್ನಾಟಕದ ಎಂ.ಆರ್‌. ಪೂವಮ್ಮ ಅವರ ಹೆಸರಿನಲ್ಲಿದ್ದ ಕೂಟ ದಾಖಲೆಯನ್ನು ಮೀರಿ ನಿಂತರು. ರಾಜ್ಯದ ಪೂವಮ್ಮ 2014ರಲ್ಲಿ 51.73 ಸೆಕೆಂಡುಗಳಲ್ಲಿ ಗುರಿ ಸೇರಿ 400 ಮೀಟರ್ಸ್‌ ವಿಭಾಗದಲ್ಲಿ ದಾಖಲೆ ಬರೆದಿದ್ದರು.
ಇದು ನಿರ್ಮಲ ಅವರ ಶ್ರೇಷ್ಠ ಸಾಧನೆಯೂ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.