ADVERTISEMENT

ರೋಹಿತ್‌ ಮೇಲೆ ತಾತ್ಕಾಲಿಕ ನಿಷೇಧ

ಪಿಟಿಐ
Published 27 ಮೇ 2017, 19:30 IST
Last Updated 27 ಮೇ 2017, 19:30 IST

ನವದೆಹಲಿ: ನಿಷೇಧಿತ ಉದ್ದೀಪನಾ ಮದ್ದು ಸೇವಿಸಿರುವುದು ಸಾಬೀತಾಗಿರುವ ಕಾರಣ ಯುವ ಜಾವೆಲಿನ್‌ ಥ್ರೋ ಸ್ಪರ್ಧಿ ರೋಹಿತ್‌ ಯಾದವ್‌ ಅವರ ಮೇಲೆ ಭಾರತ ಅಥ್ಲೆಟಿಕ್‌ ಫೆಡರೇಷನ್‌ (ಎಎಫ್‌ಐ) ಶನಿವಾರ ತಾತ್ಕಾಲಿಕ ನಿಷೇಧ ಹೇರಿದೆ.

ಇದರ ಜೊತೆಗೆ ಇತ್ತೀಚೆಗೆ ನಡೆದ ಏಷ್ಯನ್‌ ಯೂತ್‌ ಅಥ್ಲೆಟಿಕ್ಸ್‌ ಚಾಂಪಿ ಯನ್‌ಷಿಪ್‌ನಲ್ಲಿ ಗೆದ್ದ ಬೆಳ್ಳಿಯ ಪದಕ ವನ್ನು  ಅವರಿಂದ ಹಿಂದಕ್ಕೆ ಪಡೆಯುವ ಸಾಧ್ಯತೆಯೂ ಇದೆ.

ಹೋದ ತಿಂಗಳು ಹೈದರಾಬಾದ್‌ ನಲ್ಲಿ ನಡೆದಿದ್ದ ರಾಷ್ಟ್ರೀಯ ಯೂತ್‌ ಚಾಂಪಿ ಯನ್‌ಷಿಪ್‌ನ ವೇಳೆ 16 ವರ್ಷದ ರಾಹುಲ್‌ ಅವರಿಂದ  ಮೂತ್ರದ ಮಾದರಿ ಸಂಗ್ರಹಿಸಲಾಗಿತ್ತು. ಅದರಲ್ಲಿ ನಿಷೇಧಿತ ‘ಸ್ಟಾನೊಜೊಲೊಲ್‌’ ಮದ್ದಿನ ಅಂಶ ಇರು ವುದು ‘ಎ’ ಮಾದರಿಯ ಪರೀಕ್ಷೆಯಲ್ಲಿ ಪತ್ತೆಯಾಗಿದೆ.

‘ರೋಹಿತ್‌ ಅವರಿಂದ ಸಂಗ್ರಹಿಸಿದ್ದ ಮೂತ್ರದ ಮಾದರಿಯನ್ನು ಮೇ 23 ರಂದು ಪರೀಕ್ಷೆಗೆ ಕಳುಹಿಸಲಾಗಿತ್ತು. ಅದ ರಲ್ಲಿ ನಿಷೇಧಿತ ‘ಸ್ಟಾನೊಜೊಲೊಲ್‌’ ಮದ್ದಿನ ಅಂಶ ಪತ್ತೆಯಾಗಿದೆ. ಹೀಗಾಗಿ ಅವರ ಮೇಲೆ ತಾತ್ಕಾಲಿಕ ನಿಷೇಧ ಹೇರಲಾಗಿದೆ’ ಎಂದು ಎಎಫ್‌ಐ ತಿಳಿಸಿದೆ.

ರೋಹಿತ್‌ ಅವರು 2016ರಲ್ಲಿ ನಡೆದಿದ್ದ ವಿಶ್ವ ಶಾಲಾ ಕ್ರೀಡಾಕೂಟದಲ್ಲಿ ಚಿನ್ನದ ಸಾಧನೆ ಮಾಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.