ADVERTISEMENT

ಲಂಕಾ ವಿರುದ್ಧ ಭಾರತಕ್ಕೆ 69 ರನ್‌ಗಳ ಜಯ

ಟಿ-20 ಪಂದ್ಯ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2016, 17:33 IST
Last Updated 12 ಫೆಬ್ರುವರಿ 2016, 17:33 IST
ಲಂಕಾ ವಿರುದ್ಧ ಭಾರತಕ್ಕೆ 69 ರನ್‌ಗಳ ಜಯ
ಲಂಕಾ ವಿರುದ್ಧ ಭಾರತಕ್ಕೆ 69 ರನ್‌ಗಳ ಜಯ   

ರಾಂಚಿ (ಪಿಟಿಐ): ಭಾರತದ ಸ್ಪಿನ್ ಮೋಡಿಗೆ ತತ್ತರಿಸಿದ ಶ್ರೀಲಂಕಾ ಟ್ವೆಂಟಿ–20 ಸರಣಿಯ ಎರಡನೇ ಪಂದ್ಯದಲ್ಲಿ ಶುಕ್ರವಾರ ಸೋಲು ಕಂಡಿತು. ಈ ಗೆಲುವಿನೊಂದಿಗೆ ಭಾರತ ಮೂರು ಪಂದ್ಯಗಳ ಸರಣಿಯನ್ನು 1–1ರಲ್ಲಿ ಸಮಬಲ ಮಾಡಿಕೊಂಡಿತು.

ಇಲ್ಲಿನ ಜಾರ್ಖಂಡ್‌ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಭಾರತ ನಿಗದಿತ ಓವರ್‌ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 196 ರನ್‌ಗಳ ಬೃಹತ್‌ ಮೊತ್ತ ಪೇರಿಸಿತ್ತು.

ಸವಾಲಿನ ಮೊತ್ತ ಬೆನ್ನಟ್ಟಿದ ದಿನೇಶ್ ಚಾಂಡಿಮಾಲ್ ನೇತೃತ್ವದ ಶ್ರೀಲಂಕಾ ನಿಗದಿತ ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು ಕೇವಲ 127 ರನ್‌  ಗಳಿಸಿತು.

ಭಾರತದ ಪರ ಆರ್‌ ಅಶ್ವಿನ್ ಮೂರು ವಿಕೆಟ್ ಕಬಳಿಸಿ ಮಿಂಚಿದರೇ,  ರವೀಂದ್ರ ಜಡೇಜ ಎರಡು ವಿಕೆಟ್ ಪಡೆದರು.

ಅನುಭವಿ ವೇಗಿ ಆಶಿಶ್ ನೆಹ್ರಾ ಹಾಗೂ ಜಸ್ಪ್ರೀತ್ ಬೂಮ್ರಾ ಅವರು ತಲಾ ಎರಡು ವಿಕೆಟ್ ಉರುಳಿಸಿದರು.

ಲಂಕಾ ತಂಡದ ನಾಯಕ ದಿನೇಶ್‌ ಚಾಂಡಿಮಾಲ್ (31),  ಚಾಮರಾ ಕಪುಗೆದರಾ (32), ದಸುನಾ ಶನಕಾ (27)  ಹಾಗೂ ಮಿಲಿಂದ ಸಿರಿವರ್ಧನಾ (ಅಜೇಯ 28 ರನ್‌) ಅವರ ಪ್ರಯತ್ನ ಸಾಕಾಗಲಿಲ್ಲ.

ತಿಸಾರ ಪೆರೆರಾ(0), ತಿಲಕರತ್ನೆ ದಿಲ್ಶಾನ್‌ (0), ಸಚಿತ್ರಾ ಸೇನಾನಾಯಕೆ (0) ಹಾಗೂ  ದುಷ್ಮಂತಾ ಚಾಮೀರಾ (0) ಸೊನ್ನೆ ಸುತ್ತಿದರು.

ಸಿಕುಗೆ ಪ್ರಸನ್ನ (1) ಹಾಗೂ ಧನುಷ್ಕಾ ಗುಣತಿಲಕಾ(2) ಸದ್ದು ಮಾಡಲಿಲ್ಲ. ಕಸುನ್‌ ರಜಿತಾ (3) ಅಜೇಯರಾಗುಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.