ADVERTISEMENT

ಲಾಭಕ್ಕಾಗಿಯೇ ಕ್ರೀಡಾ ತಂಡವನ್ನು ಕಟ್ಟಬೇಕಾಗಿಲ್ಲ

​ಪ್ರಜಾವಾಣಿ ವಾರ್ತೆ
Published 26 ಜುಲೈ 2017, 19:38 IST
Last Updated 26 ಜುಲೈ 2017, 19:38 IST
ಲಾಭಕ್ಕಾಗಿಯೇ ಕ್ರೀಡಾ ತಂಡವನ್ನು ಕಟ್ಟಬೇಕಾಗಿಲ್ಲ
ಲಾಭಕ್ಕಾಗಿಯೇ ಕ್ರೀಡಾ ತಂಡವನ್ನು ಕಟ್ಟಬೇಕಾಗಿಲ್ಲ   

ಬೆಂಗಳೂರು: ಪ್ರತಿಯೊಬ್ಬ ಯಶಸ್ವಿ ಉದ್ಯಮಿಗೂ ಕ್ರೀಡಾ ತಂಡವೊಂದರ ಒಡೆತನ ಹೊಂದಬೇಕೆಂಬ ಕನಸಿರುತ್ತದೆ. ತಮ್ಮ ತಂಡ ಪ್ರತಿಷ್ಠಿತ ಲೀಗ್‌ವೊಂದರ ಭಾಗವಾಗಿರಬೇಕು, ಅದರ ಹೆಸರು ಜನ ಮಾನಸದಲ್ಲಿ ಶಾಶ್ವತ ವಾಗಿ ಉಳಿಯಬೇಕು ಎಂಬ ಮಹಾ ದಾಸೆಯೂ ಅವರದ್ದಾಗಿರುತ್ತದೆ. ಒಂದು ತಂಡವನ್ನು ಕಟ್ಟಿ ಅದನ್ನು ಯಶಸ್ಸಿನ ಶಿಖರಕ್ಕೇರಿಸುವುದು ಸುಲ ಭದ ಮಾತಲ್ಲ. ಇದಕ್ಕಾಗಿ ಸಾಕಷ್ಟು ಹಣ ವ್ಯಯಿಸಬೇಕಾಗುತ್ತದೆ. ಹೀಗಾಗಿ ಪ್ರತಿಫಲ ಅಪೇಕ್ಷಿಸುವುದು ತಪ್ಪಲ್ಲ. ಹಾಗಂತ ಎಲ್ಲವನ್ನೂ ಲಾಭದ ದೃಷ್ಟಿ ಯಲ್ಲಿ ನೋಡುವುದೂ ಒಳಿತಲ್ಲ.

ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಸಂತೃಪ್ತಿ ಕಾಣಬೇಕು. ತಂಡ ವೊಂದರ ಮಾಲೀಕತ್ವ ಹೊಂದುವುದು ಪ್ರತಿಷ್ಠೆಯ ವಿಷಯ. ತಂಡ ಕಟ್ಟುವುದು, ಅದನ್ನು ಬೆಳೆಸುವುದರಲ್ಲಿ ಸಿಗುವ ಸಂತಸ ಪದಗಳಿಗೆ ನಿಲುಕದ್ದು. ತಂಡದ ಶ್ರೇಯಸ್ಸಿನ ಹಿಂದೆ ಸಾವಿರಾರು ಮಂದಿಯ ಶ್ರಮ ಇರುತ್ತದೆ. ತಡವಾಗಿಯಾದರೂ ಒಬ್ಬೊಬ್ಬರ ಬೆವರ ಹನಿಗೂ ಚಿನ್ನದ ಮೌಲ್ಯ ಸಿಕ್ಕೇ ಸಿಗುತ್ತದೆ. ಹೀಗಾಗಿ ಯಾರೂ ಅಧೀರರಾಗುವುದು ಬೇಡ.

ಭಾರತದ ಮಟ್ಟಿಗೆ ಅತ್ಯಂತ ಯಶಸ್ವಿ ದೇಶಿ ಲೀಗ್‌ ಎಂಬ ಹೆಗ್ಗಳಿಕೆ ತನ್ನದಾಗಿಸಿಕೊಂಡಿರುವ ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ಈ ಬಾರಿ ಹೊಸ ರೂಪದೊಂದಿಗೆ ನಿಮ್ಮ ಮುಂದೆ ಬರುತ್ತಿದ್ದು, ಕ್ರೀಡಾ ಕೈಂಕರ್ಯ ಹೊಂದಿರುವ ಕರ್ನಾಟಕದ ಉದ್ಯಮಿಗಳಿಗೆ ಕ್ರಿಕೆಟ್‌ನ ಜೊತೆ ನಿಕಟ ಬಾಂಧವ್ಯ ಹೊಂದುವ ಸುವರ್ಣಾ ವಕಾಶವೊಂದನ್ನು ಒದಗಿಸುತ್ತಿದೆ. ರಾಜ್ಯದ ಪ್ರಮುಖ ಎಂಟು ನಗರಗಳನ್ನು ಪ್ರತಿನಿಧಿಸುವ ತಂಡಗಳು ಈ ಸಲವೂ ಲೀಗ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಲಿವೆ.

ADVERTISEMENT

ಹಿಂದೆ ತಂಡದ ಮಾಲೀಕತ್ವ ಹೊಂದಿದ್ದವರ ಪೈಕಿ ಬಹುತೇಕರು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ (ಕೆಎಸ್‌ಸಿಎ) ಹೊಸ ನಿಯ ಮಾವಳಿಗಳಿಗೆ ಬದ್ಧರಾಗಿ ಈ ಬಾರಿಯೂ ಕೆಪಿಎಲ್‌ಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಲೀಗ್‌ನಲ್ಲಿ ಹೊಸ ಇನಿಂಗ್ಸ್‌ ಆರಂಭಿಸಲು ಉತ್ಸುಕರಾಗಿರುವವರಿಗೂ ಈಗ ಅವಕಾಶದ ಬಾಗಿಲು ತೆರೆದಿದೆ. ಈ ಸಲ ಬೆಂಗಳೂರಿನ ತಂಡವೂ ಆಡಲಿದೆ ಎಂಬುದು ಖುಷಿಯ ವಿಚಾರ.

ಆಸಕ್ತರು ಶೀಘ್ರವೇ ಬಿಡ್‌ ಸಲ್ಲಿಸುವ ಭರವಸೆ ಇದ್ದು, ಕೆಎಸ್‌ಸಿಎ ಕೆಲವೇ ದಿನಗಳಲ್ಲಿ ಹೊಸ ತಂಡಗಳ ಮಾಲೀಕರ ಪಟ್ಟಿಯನ್ನು ಪ್ರಕಟಿಸಲಿದೆ. ಹೊಸ ಆಲೋಚನೆಗಳು, ಹೊಸ ಯೋಜನೆಗಳಿಗೆ ಈ ಬಾರಿ ಮುಕ್ತ ಅವಕಾಶ ನೀಡಿದ್ದೇವೆ. ಹೊಸ ಪ್ರತಿಭೆಗಳು ಹೊಸ ಕನಸಿನೊಂದಿಗೆ  ಲೀಗ್‌ನಲ್ಲಿ ಆಡಲು ಕಾತರರಾಗಿದ್ದಾರೆ. ಭಾರ ತದ ಕ್ರಿಕೆಟ್‌ ಲೋಕಕ್ಕೆ ಹಲವು ದಿಗ್ಗಜ ಆಟಗಾರರನ್ನು ಕೊಡುಗೆ ಯಾಗಿ ನೀಡಿರುವ ಕರ್ನಾಟಕ ಮುಂದೆಯೂ ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗ ಲಿದೆ. ಇದಕ್ಕೆ ಕೆಪಿಎಲ್‌ ಸೂಕ್ತ ವೇದಿಕೆಯಾಗಲಿದೆ.

ವರ್ಷಕ್ಕೊಮ್ಮೆ ನಡೆಯುವ ಈ ಲೀಗ್‌ ಜನರ ಮನಸಿನಲ್ಲಿ ಹಾಸು ಹೊಕ್ಕಾಗಿದೆ.  ಎಲ್ಲಾ ತಂಡಗಳ ಮಾಲೀ ಕರಿಗೂ ಅಭಿನಂದನೆಗಳು. ಸೆಪ್ಟೆಂಬರ್‌ 1ರಿಂದ ರಾಜ್ಯದಲ್ಲಿ ಮತ್ತೆ ಕ್ರಿಕೆಟ್‌ ಕಲರವ ಶುರುವಾಗಲಿದೆ. ಕರ್ನಾಟಕದ ಕ್ರಿಕೆಟ್‌ ಪ್ರಿಯರು ಮನರಂಜನೆಯ ಹೊಳೆಯಲ್ಲಿ ಮಿಂದೇಳುವ ಸಮಯ ಸಮೀಪಿಸುತ್ತಿದೆ. ಇದಕ್ಕಾಗಿ ಎಲ್ಲರೂ ಸಿದ್ಧರಾಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.