ADVERTISEMENT

ವಿಂಡೀಸ್‌ಗೆ ಬಂದಿಳಿದ ವಿರಾಟ್ ಪಡೆ

ಪಿಟಿಐ
Published 21 ಜೂನ್ 2017, 19:30 IST
Last Updated 21 ಜೂನ್ 2017, 19:30 IST

ಪೋರ್ಟ್ ಆಫ್‌ ಸ್ಪೇನ್, ಟ್ರಿನಿಡಾಡ್: ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್ ತಂಡವು ಬುಧವಾರ ಇಲ್ಲಿಗೆ ಬಂದಿಳಿಯಿತು. ವಿಂಡೀಸ್‌ನಲ್ಲಿ ಜೂನ್ 23ರಿಂದ ಭಾರತ ತಂಡವು ಐದು ಏಕದಿನ ಮತ್ತು ಒಂದು ಟ್ವೆಂಟಿ–20 ಪಂದ್ಯಗಳನ್ನು ಆಡಲಿದೆ.

ಲಂಡನ್‌ನಲ್ಲಿ ಜೂನ್ 18ರಂದು  ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ಭಾರತ ತಂಡ ಫೈನಲ್‌ನಲ್ಲಿ ಸೋತಿತ್ತು. 20ರಂದು ವೆಸ್ಟ್‌ ಇಂಡೀಸ್‌ಗೆ ಪ್ರಯಾಣಿ
ಸಿತ್ತು.  ಅದೇ ಸಂದರ್ಭದಲ್ಲಿ ತಂಡದ ಮುಖ್ಯ ಕೋಚ್ ಅನಿಲ್ ಕುಂಬ್ಳೆ ರಾಜೀನಾಮೆ ನೀಡಿದ್ದರು. ಆದ್ದರಿಂದ ಅವರು ತಂಡದೊಂದಿಗೆ ಪ್ರಯಾಣಿಸಲಿಲ್ಲ.
ಕುಂಬ್ಳೆ ಅವರು ತಾವು ರಾಜೀನಾಮೆ ನೀಡಲು ಕೊಹ್ಲಿ ಅವರ ಭಿನ್ನಾಭಿಪ್ರಾಯವೇ ಕಾರಣವೆಂದು ಟ್ವೀಟ್ ಮಾಡಿರುವುದು ಈಗ ಜಗಜ್ಜಾಹೀರಾಗಿದೆ. ಅದರ ಕುರಿತು ವಿರಾಟ್ ಕೊಹ್ಲಿ ಅವರು ಇಲ್ಲಿ ಪ್ರತಿಕ್ರಿಯಿಸುವ ನಿರೀಕ್ಷೆ ಇದೆ.

ತಂಡದೊಂದಿಗೆ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್, ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಕೂಡ ಇದ್ದಾರೆ.

ADVERTISEMENT

ಜೇಸನ್ ಹೋಲ್ಡರ್ ನಾಯಕತ್ವದ ವಿಂಡೀಸ್ ತಂಡವು ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಅದರಿಂದಾಗಿಯೇ ತಂಡವು ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಆಡಲು ಅರ್ಹತೆ ಗಳಿಸಿರಲಿಲ್ಲ.

ಭಾರತ ತಂಡವು ಹೋದ ವರ್ಷದ ಜೂನ್‌ನಲ್ಲಿ ವಿಂಡೀಸ್ ಪ್ರವಾಸ ಮಾಡಿತ್ತು. ಆಗ ನಾಲ್ಕು ಟೆಸ್ಟ್‌ಗಳ ಸರಣಿಯಲ್ಲಿ 2–0ಯಿಂದ ಗೆದ್ದಿತ್ತು. ಕುಂಬ್ಳೆ ಅವರು ಕೋಚ್ ಆಗಿ ನೇಮಕವಾದ ನಂತರ ಭಾರತ ತಂಡವು ಮೊದಲು ಆಡಿದ ಸರಣಿ ಅದಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.