ADVERTISEMENT

ಶೂಟಿಂಗ್: ಅಂಕುರ್‌ ಮಿತ್ತಲ್‌ಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 18:57 IST
Last Updated 23 ಮಾರ್ಚ್ 2017, 18:57 IST
ಶೂಟಿಂಗ್: ಅಂಕುರ್‌ ಮಿತ್ತಲ್‌ಗೆ ಚಿನ್ನ
ಶೂಟಿಂಗ್: ಅಂಕುರ್‌ ಮಿತ್ತಲ್‌ಗೆ ಚಿನ್ನ   

ಅಕಾಪುಲ್ಕೊ, ಮೆಕ್ಸಿಕೊ (ಪಿಟಿಐ):  ಭಾರತದ ಅಂಕುರ್ ಮಿತ್ತಲ್‌ ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ಶಾಟ್‌ಗನ್ ವಿಶ್ವಕಪ್‌ ಶೂಟಿಂಗ್‌ನಲ್ಲಿ ಗುರುವಾರ ಚಿನ್ನದ ಪದಕ ಗೆದ್ದರು.

ಡಬಲ್‌ ಟ್ರ್ಯಾಪ್‌ ವಿಭಾಗದ ಫೈನಲ್‌ನಲ್ಲಿ ಭಾರತದ ಶೂಟರ್ ಆಸ್ಟ್ರೇಲಿಯಾದ ಜೇಮ್ಸ್‌ ವಿಲ್ಲೆಟ್ ಅವರನ್ನು ಹಿಂದಿಕ್ಕಿದರು. ಈ ಟೂರ್ನಿಯಲ್ಲಿ ಭಾರತ ಗೆದ್ದ ಮೊದಲ ಪದಕ ಇದಾಗಿದೆ. ಆರು ಸ್ಪರ್ಧಿಗಳನ್ನು ಹೊಂದಿದ್ದ ಅಂತಿಮ ಸುತ್ತಿನಲ್ಲಿ ಮಿತ್ತಲ್‌ 80ರಲ್ಲಿ 75 ಪಾಯಿಂಟ್ಸ್ ಕಲೆಹಾಕಿದರೆ, ವಿಲ್ಲೆಟ್‌ 73 ಪಾಯಿಂಟ್ಸ್ ಗಳಿಸಿದರು.

ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಮಿತ್ತಲ್ ಬೆಳ್ಳಿ ಜಯಿಸಿದ್ದರು. ವಿಲ್ಲೆಟ್ ಚಿನ್ನಕ್ಕೆ ಕೊರಳೊಡ್ಡಿದ್ದರು. ಅರ್ಹತಾ ಸುತ್ತಿನಲ್ಲೇ ತಮ್ಮ ಅಮೋಘ ಸಾಮರ್ಥ್ಯ ಸಾಬೀತು ಮಾಡಿ ದ್ದ ಮಿತ್ತಲ್‌ 150ರಲ್ಲಿ 138 ಪಾಯಿಂಟ್ಸ್‌ ಕಲೆಹಾಕುವ ಮೂಲಕ ಎರಡನೇ ಸ್ಥಾನ ಗಳಿಸಿದ್ದರು.  ಚೀನಾದ ಯಿಂಗ್ ಕಿ ಹಾಗೂ ಭಾರತದ ಆಟಗಾ ರನ ನಡುವೆ ಅರ್ಹತಾ ಸುತ್ತಿನಲ್ಲಿ ಪ್ರಬಲ ಪೈಪೋಟಿ ಏರ್ಪಟ್ಟಿತ್ತು. ಇಬ್ಬರು ಸ್ಪರ್ಧಿಗಳು ಸಮನಾದ ಪಾಯಿಂಟ್ಸ್‌ ಪಡೆದು ಕೊಂಡಿದ್ದರು.

ADVERTISEMENT

ಅಂತಿಮ ಸುತ್ತಿನಲ್ಲಿ ಯಿಂಗ್ ಕೇವಲ 52 ಪಾಯಿಂಟ್ಸ್‌ ಪಡೆದು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಮಿತ್ತಲ್ 78 ಪಾಯಿಂಟ್ಸ್ ಗಳಿಸಿದ್ದರೆ ವಿಶ್ವದಾಖಲೆ ನಿರ್ಮಿಸುವ ಅವಕಾಶ ಇತ್ತು. ಆದರೆ ಅವರು 80ರಲ್ಲಿ 75 ನಿಖರ ಗುರಿಗಳನ್ನು ಪೂರೈಸಿದ್ದರಿಂದ ಈ ಅವಕಾಶ ಕಳೆದು ಕೊಂಡರು.
ಮಹಿಳೆಯರ ಹಾಗೂ ಪುರುಷರ ಸ್ಕೀಟ್ ವಿಭಾಗದ ಸ್ಪರ್ಧೆಗಳು ಇನ್ನೂ ಬಾಕಿ ಇವೆ. ಈ ಪಂದ್ಯಗಳು ವಾರಾಂತ್ಯ ದಲ್ಲಿ ನಡೆಯಲಿವೆ.

ಮಹಿಳೆಯರ ಸ್ಕೀಟ್‌ನಲ್ಲಿ ರಶ್ಮಿ ರಾಥೋಡ್ ಭಾರತದ ಏಕೈಕ ಭರವಸೆ ಎನಿಸಿದ್ದಾರೆ. ಪುರುಷರ ಸ್ಕೀಟ್‌ನಲ್ಲಿ ಅಂಗದ್ ವೀರ್‌ ಸಿಂಗ್ ಬಾಜ್ವಾ, ಮಾನ್ ಸಿಂಗ್ ಮತ್ತು ಅಮರಿಂದರ್ ಚೀಮಾ ಭಾರತದ ಸವಾಲು ಮುನ್ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.