ADVERTISEMENT

ಶ್ರೀಲಂಕಾ ಪ್ರವಾಸ: ಆಸ್ಟ್ರೇಲಿಯಾ ತಂಡದಲ್ಲಿ ಹೆನ್ರಿಕ್ಸ್

​ಪ್ರಜಾವಾಣಿ ವಾರ್ತೆ
Published 24 ಮೇ 2016, 19:30 IST
Last Updated 24 ಮೇ 2016, 19:30 IST
ಮೊಯಿಸೆಸ್ ಹೆನ್ರಿಕ್ಸ್‌
ಮೊಯಿಸೆಸ್ ಹೆನ್ರಿಕ್ಸ್‌   

ಸಿಡ್ನಿ (ಎಎಫ್‌ಪಿ): ಆಲ್‌ರೌಂಡರ್ ಮೊಯಿಸೆಸ್ ಹೆನ್ರಿಕ್ಸ್ ಅವರನ್ನು ಆಸ್ಟ್ರೇಲಿಯಾ  ತಂಡಕ್ಕೆ ಆಯ್ಕೆ ಮಾಡಲಾಗಿದೆ.  ಶ್ರೀಲಂಕಾ ವಿರುದ್ಧ ನಡೆಯಲಿರುವ ಟೆಸ್ಟ್‌ ಸರಣಿಯಲ್ಲಿ ಅವರು ಆಡಲಿದ್ದಾರೆ. ಜುಲೈ 26ರಿಂದ ಸರಣಿ ಆರಂಭವಾಗಲಿದೆ.

ಶ್ರೀಲಂಕಾ ಆತಿಥ್ಯ ವಹಿಸಲಿರುವ ಸರಣಿಯು ಎರಡು ತಿಂಗಳು ನಡೆಯಲಿದೆ. ಮೂರು ಟೆಸ್ಟ್, ಐದು ಏಕದಿನ ಮತ್ತು ಎರಡು ಟ್ವೆಂಟಿ–20 ಪಂದ್ಯಗಳು ನಡೆಯಲಿವೆ.  ಟೆಸ್ಟ್ ಪಂದ್ಯಗಳನ್ನು  ಕ್ಯಾಂಡಿ, ಗಾಲ್ ಮತ್ತು ಕೊಲಂಬೊಗಳಲ್ಲಿ ಆಯೋಜಿಸಲಾಗಿದೆ. 

ಸ್ಟೀವ್ ಸ್ಮಿತ್ ನಾಯಕರಾಗಿರುವ ತಂಡಡಕ್ಕೆ ಒಟ್ಟು 15 ಆಟಗಾರರನ್ನು ಆಯ್ಕೆ ಮಾಡಲಾಗಿದೆ.  2011ರಲ್ಲಿ ಆಸ್ಟ್ರೇಲಿಯಾ ತಂಡವು ಶ್ರೀಲಂಕಾದಲ್ಲಿ ಟೆಸ್ಟ್ ಸರಣಿ ಆಡಿತ್ತು. ಅದರ ನಂತರ ಈಗ ಮತ್ತೊಮ್ಮೆ ಸರಣಿ ಆಡಲಿದೆ.

ತಂಡ ಇಂತಿದೆ: ಸ್ಟೀವ್ ಸ್ಮಿತ್ (ನಾಯಕ), ಡೇವಿಡ್ ವಾರ್ನರ್, ಜ್ಯಾಕ್ಸನ್ ಬರ್ಡ್, ಜೊ ಬರ್ನ್ಸ್, ನಾಥನ್ ಕೌಲ್ಟರ್ ನೈಲ್, ಜೋಶ್ ಹ್ಯಾಜಲ್‌ವುಡ್, ಮೊಯಿಸೆಸ್ ಹೆನ್ರಿಕ್ಸ್, ಉಸ್ಮಾನ್ ಖ್ವಾಜಾ, ನಾಥನ್ ಲಿಯೊನ್, ಮಿಷೆಲ್ ಮಾರ್ಷ್, ಶಾನ್ ಮಾರ್ಷ್, ಪೀಟರ್ ನೆವಿಲ್. ಸ್ಟಿಫನ್ ಒಕೀಫ್, ಮಿಷೆಲ್ ಸ್ಟಾರ್ಕ್, ಆ್ಯಡಂ ವೋಗ್ಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.