ADVERTISEMENT

ಸಮರ್ಥ್‌–ಮಯಂಕ್‌ ಜತೆಯಾಟ

ಬೃಹತ್‌ ಮೊತ್ತದತ್ತ ಕೆಎಸ್‌ಸಿಎ ಇಲೆವನ್‌

​ಪ್ರಜಾವಾಣಿ ವಾರ್ತೆ
Published 22 ಜುಲೈ 2017, 19:30 IST
Last Updated 22 ಜುಲೈ 2017, 19:30 IST
ಶತಕ ದಾಖಲಿಸಿದ ಬಳಿಕ ಬ್ಯಾಟ್ ಎತ್ತಿ ಸಂಭ್ರಮಿಸಿದ ಆರ್‌. ಸಮರ್ಥ್‌
ಶತಕ ದಾಖಲಿಸಿದ ಬಳಿಕ ಬ್ಯಾಟ್ ಎತ್ತಿ ಸಂಭ್ರಮಿಸಿದ ಆರ್‌. ಸಮರ್ಥ್‌   

ಬೆಂಗಳೂರು: ಆರ್‌. ಸಮರ್ಥ್‌ (124; 217ಎ, 11ಬೌಂ) ಮತ್ತು ಮಯಂಕ್‌ ಅಗರವಾಲ್‌ (97; 155ಎ, 7ಬೌಂ, 1ಸಿ) ಅವರ ಅತ್ಯುತ್ತಮ ಜೊತೆಯಾಟದ ಬಲದಿಂದ ಕೆಎಸ್‌ಸಿಎ ಇಲೆವನ್‌ ತಂಡ ಕೆ. ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌ ಟೂರ್ನಿಯ ಅಸ್ಸಾಂ ಕ್ರಿಕೆಟ್‌ ಸಂಸ್ಥೆ ವಿರುದ್ಧದ ಪಂದ್ಯದಲ್ಲಿ ಬೃಹತ್‌ ಮೊತ್ತದತ್ತ ಮುನ್ನಡೆದಿದೆ.

ಕೆಎಸ್‌ಸಿಎ ಮೈದಾನದಲ್ಲಿ ಶನಿವಾರ ಮೊದಲು ಬ್ಯಾಟ್‌ ಮಾಡಿದ ಸಿ.ಎಂ. ಗೌತಮ್‌ ಸಾರಥ್ಯದ ತಂಡ ದಿನದಾಟದ ಅಂತ್ಯಕ್ಕೆ 90 ಓವರ್‌ಗಳಲ್ಲಿ 3 ವಿಕೆಟ್‌ಗೆ 343 ರನ್‌ ಗಳಿಸಿದೆ.

ಬ್ಯಾಟಿಂಗ್‌ ಆರಂಭಿಸಿದ ಗೌತಮ್‌ ಪಡೆಗೆ  ಅಭಿಷೇಕ್‌ ರೆಡ್ಡಿ  46 ರನ್‌ ಗಳಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಅಭಿಷೇಕ್‌ ಔಟಾದ ನಂತರ ಸಮರ್ಥ್‌ ಮತ್ತು ಮಯಂಕ್‌ ಅವರ ಜೊತೆಯಾಟ ರಂಗೇರಿತು. ಇವರು ಎರಡನೇ ವಿಕೆಟ್‌ ಪಾಲುದಾರಿಕೆಯಲ್ಲಿ 295 ಎಸೆತಗಳಲ್ಲಿ 197 ರನ್‌ ಬಾರಿಸಿ ಮಿಂಚಿದರು.

ADVERTISEMENT

ಕುನಾಲ್‌–ಅನಿರುದ್ಧ್‌ ಶತಕದ ಮಿಂಚು
ಆರ್‌ಎಸ್‌ಐ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಂಧ್ರ ಕ್ರಿಕೆಟ್‌ ಸಂಸ್ಥೆ ವಿರುದ್ಧದ ಪಂದ್ಯದಲ್ಲಿ ಕೆಎಸ್‌ಸಿಎ ಅಧ್ಯಕ್ಷರ ಇಲೆವನ್‌ ತಂಡ ಸವಾಲಿನ ಮೊತ್ತ ಕಲೆ ಹಾಕಿದೆ.

ಈ ತಂಡದ ಕುನಾಲ್‌ ಕಪೂರ್‌ (129; 184ಎ, 18ಬೌಂ) ಮತ್ತು ಅನಿರುದ್ಧ್‌ ಜೋಶಿ (111; 111ಎ, 10ಬೌಂ, 5ಸಿ) ಅವರು ಶತಕ ಗಳಿಸಿದರು. ಇವರು ನಾಲ್ಕನೇ ವಿಕೆಟ್‌ಗೆ 220 ಎಸೆತಗಳಲ್ಲಿ 168ರನ್‌ ಸೇರಿಸಿ ತಂಡದ ಮೊತ್ತ 300ರ ಗಡಿ ದಾಟುವಂತೆ ನೋಡಿಕೊಂಡರು.

ಸಂಕ್ಷಿಪ್ತ ಸ್ಕೋರ್‌: ಕೆಎಸ್‌ಸಿಎ ಇಲೆವನ್‌, ಮೊದಲ ಇನಿಂಗ್ಸ್‌: 90 ಓವರ್‌ಗಳಲ್ಲಿ 3 ವಿಕೆಟ್‌ಗೆ 343 (ಅಭಿಷೇಕ್‌ ರೆಡ್ಡಿ 46, ಆರ್‌. ಸಮರ್ಥ್‌ 124, ಮಯಂಕ್‌ ಅಗರವಾಲ್‌ 97, ಮಿರ್‌ ಕೌನೈನ್‌ ಅಬ್ಬಾಸ್‌ ಬ್ಯಾಟಿಂಗ್‌ 45, ಪವನ್‌ ದೇಶಪಾಂಡೆ ಬ್ಯಾಟಿಂಗ್‌ 21).  (ಅಸ್ಸಾಂ ಕ್ರಿಕೆಟ್‌ ಸಂಸ್ಥೆ ವಿರುದ್ಧದ ಪಂದ್ಯ).
ಕೆಎಸ್‌ಸಿಎ ಅಧ್ಯಕ್ಷರ ಇಲೆವನ್‌, ಪ್ರಥಮ ಇನಿಂಗ್ಸ್‌: 90 ಓವರ್‌ಗಳಲ್ಲಿ 9 ವಿಕೆಟ್‌ಗೆ 369 (ಅರ್ಜುನ್‌ ಹೊಯ್ಸಳ 38, ಕುನಾಲ್‌ ಕಪೂರ್‌ 129, ಅನಿರುದ್ಧ್‌ ಜೋಶಿ 111, ಪ್ರವೀಣ್‌ ದುಬೆ 40, ಮಿತ್ರಕಾಂತ್‌ ಸಿಂಗ್‌ ಯಾದವ್‌ ಬ್ಯಾಟಿಂಗ್‌ 28; ಪಿ. ವಿಜಯ್‌ ಕುಮಾರ್‌ 29ಕ್ಕೆ2, ಬಿ. ಅಯ್ಯಪ್ಪ 76ಕ್ಕೆ3, ಐ. ಕಾರ್ತಿಕ್‌ ರಾಮನ್‌ 74ಕ್ಕೆ3).

(ಆಂಧ್ರ ಕ್ರಿಕೆಟ್‌ ಸಂಸ್ಥೆ ಎದುರಿನ ಪಂದ್ಯ). ಬಂಗಾಳ ಕ್ರಿಕೆಟ್‌ ಸಂಸ್ಥೆ: 90 ಓವರ್‌ಗಳಲ್ಲಿ 4 ವಿಕೆಟ್‌ಗೆ 305 (ಪುರವ್‌ ಜೋಷಿ 122, ಸುದೀಪ್‌ ಚಟರ್ಜಿ ಬ್ಯಾಟಿಂಗ್‌ 110, ಅಗ್ನಿವ್‌ ಪಾನ್‌ 34; ವೈಶಾಖ್‌ ವಿಜಯಕುಮಾರ್‌ 58ಕ್ಕೆ2, ಕೆ.ಸಿ. ಕಾರ್ಯಪ್ಪ 86ಕ್ಕೆ2).

(ಕೆಎಸ್‌ಸಿಎ ಕೋಲ್ಟ್ಸ್‌ ವಿರುದ್ಧದ ಪಂದ್ಯ). ಹರಿಯಾಣ ಕ್ರಿಕೆಟ್‌ ಸಂಸ್ಥೆ: 90 ಓವರ್‌ಗಳಲ್ಲಿ 5 ವಿಕೆಟ್‌ಗೆ 403 (ಶುಭಂ ರೋಹಿಲ್ಲಾ 119, ಚೈತನ್ಯ ಬಿಷ್ಣೋಯ್‌ 82, ರಾಹುಲ್‌ ದಾಗರ್‌ 62, ರಜತ್‌ ಪಲಿವಾಲ್‌ ಬ್ಯಾಟಿಂಗ್‌ 107). (ಮಧ್ಯಪ್ರದೇಶ ಎದುರಿನ ಪಂದ್ಯ).

ತ್ರಿಪುರ ಕ್ರಿಕೆಟ್‌ ಸಂಸ್ಥೆ: 90 ಓವರ್‌ಗಳಲ್ಲಿ 6 ವಿಕೆಟ್‌ಗೆ 304 (ಯಶ್‌ಪಾಲ್‌ ಸಿಂಗ್‌ ಬ್ಯಾಟಿಂಗ್‌ 114, ಮಣಿಶಂಕರ್‌ ಮುರಾಸಿಂಗ್‌ 79; ಪಂಕಜ್‌ ಜಸ್ವಾಲ್‌ 72ಕ್ಕೆ2).

(ಹಿಮಾಚಲ ಪ್ರದೇಶ ವಿರುದ್ಧದ ಪಂದ್ಯ). ಡಿ.ವೈ. ಪಾಟೀಲ ಕ್ರಿಕೆಟ್‌ ಅಕಾಡೆಮಿ: 56.4 ಓವರ್‌ಗಳಲ್ಲಿ 230 (ಶೋಯಬ್‌ ಶೇಖ್‌ 53, ಕೆವಿನ್‌ ಅಲ್ಮೇಡಾ 42; ಜಸ್‌ಕರಣ್‌ ಸಿಂಗ್‌ 67ಕ್ಕೆ5, ಸಮರ್‌ ಖಾದ್ರಿ 68ಕ್ಕೆ4).

ಜಾರ್ಖಂಡ್‌ ಕ್ರಿಕೆಟ್‌ ಸಂಸ್ಥೆ: ಪ್ರಥಮ ಇನಿಂಗ್ಸ್‌: 33 ಓವರ್‌ಗಳಲ್ಲಿ 1 ವಿಕೆಟ್‌ಗೆ 135 (ಬಾಬುಲ್‌ ಕುಮಾರ್‌ ಬ್ಯಾಟಿಂಗ್‌ 54, ಪ್ರತ್ಯೂಷ್‌ ಸಿಂಗ್‌ ಬ್ಯಾಟಿಂಗ್‌ 56). ಮೈಸೂರಿನಲ್ಲಿ ನಡೆಯುತ್ತಿರುವ ಪಂದ್ಯಗಳ ಫಲಿತಾಂಶ.

ಮುಂಬೈ ಕ್ರಿಕೆಟ್‌ ಸಂಸ್ಥೆ: ಮೊದಲ ಇನಿಂಗ್ಸ್‌: 89 ಓವರ್‌ಗಳಲ್ಲಿ 4 ವಿಕೆಟ್‌ಗೆ 381 (ಅಖಿಲ್‌ ಹೇರ್ವಾಡ್ಕರ್‌ 79, ಜಯ್‌  ಬಿಸ್ತಾ 191; ಮೆಹುಲ್‌ ಪಟೇಲ್‌ 61ಕ್ಕೆ2, ಈಶ್ವರ್‌ ಚೌಧರಿ 92ಕ್ಕೆ2).

(ಗುಜರಾತ್‌ ಕ್ರಿಕೆಟ್‌ ಸಂಸ್ಥೆ ಎದುರಿನ ಪಂದ್ಯ). ಪಂಜಾಬ್‌ ಕ್ರಿಕೆಟ್‌ ಸಂಸ್ಥೆ: ಪ್ರಥಮ ಇನಿಂಗ್ಸ್‌: 53.4 ಓವರ್‌ಗಳಲ್ಲಿ 173 (ಮನನ್‌ ವೊಹ್ರಾ 56, ಗುರುಕೀರತ್‌ ಸಿಂಗ್‌ ಮಾನ್‌ 33, ಸಂದೀಪ್‌ ಶರ್ಮಾ 36; ಮೊಹಮ್ಮದ್‌ ನಿದೀಶ್‌ 31ಕ್ಕೆ2, ಫನೂಸ್‌ 46ಕ್ಕೆ2, ಮೋನಿಷ್‌ 53ಕ್ಕೆ3, ಫಾಬಿದ್‌ ಫಾರೂಕ್‌ ಅಹ್ಮದ್‌ 36ಕ್ಕೆ3).

ಕೇರಳ ಕ್ರಿಕೆಟ್‌ ಸಂಸ್ಥೆ: 34 ಓವರ್‌ಗಳಲ್ಲಿ 3 ವಿಕೆಟ್‌ಗೆ 114 (ವಿಷ್ಣು ವಿನೋದ್‌ 23, ರೋಹನ್‌ ಪ್ರೇಮ್‌ ಬ್ಯಾಟಿಂಗ್‌ 29; ಗುರುಕೀರತ್‌ ಸಿಂಗ್‌ ಮಾನ್‌ 24ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.