ADVERTISEMENT

ಸಾಧನೆಯ ಹಸಿವಿದ್ದವರಿಗೆ ಮಾತ್ರ ಬೆಂಬಲ: ಆನಂದ್

​ಪ್ರಜಾವಾಣಿ ವಾರ್ತೆ
Published 28 ಜುಲೈ 2015, 19:30 IST
Last Updated 28 ಜುಲೈ 2015, 19:30 IST

ಬೆಂಗಳೂರು: ‘ದೊಡ್ಡ ಕ್ರೀಡಾಕೂಟ ಗಳಲ್ಲಿ ಸಾಧನೆ ಮಾಡಬೇಕೆನ್ನುವ ಹಂಬಲ ಹೊಂದಿರುವ ಕ್ರೀಡಾಪಟು ಗಳಿಗೆ ಮಾತ್ರ  ನೆರವು ನೀಡುತ್ತೇವೆ. ರಿಯೊ ಒಲಿಂಪಿಕ್ಸ್‌ ಮಾತ್ರವಲ್ಲ. ಮುಂದಿನ ಒಲಿಂಪಿಕ್ಸ್‌ಗೂ ಒಜಿಕ್ಯೂ ನೆರವು ನೀಡುತ್ತದೆ’ ಎಂದು ಒಜಿಕ್ಯೂ ಮಂಡಳಿಯ ನಿರ್ದೇಶಕ ಹಾಗೂ ಗ್ರ್ಯಾಂಡ್ ಮಾಸ್ಟರ್‌ ವಿಶ್ವನಾಥನ್ ಆನಂದ್ ಹೇಳಿದರು.

ಮಾಜಿ ವಿಶ್ವ ಚಾಂಪಿಯನ್‌ ಆನಂದ್‌ 2010ರಲ್ಲಿ ಒಜಿಕ್ಯೂ ಸೇರ್ಪಡೆ ಯಾಗಿದ್ದರು. ‘ಒಜಿಕ್ಯೂನ ಭಾಗವಾಗಿರುವುದಕ್ಕೆ ಸಂತೋಷವಾಗಿದೆ. ಸಾಕಷ್ಟು ಕ್ರೀಡಾ ಪಟುಗಳನ್ನು ಭೇಟಿಯಾಗಲು ಅವಕಾಶ ಸಿಕ್ಕಿದೆ. ಅವರಿಂದಲೂ ಕಲಿತಿದ್ದೇನೆ. ಈ ಯೋಜನೆಗೆ ಕ್ರೀಡಾಪಟುಗಳನ್ನು ಆಯ್ಕೆ ಮಾಡುವಾಗ ತುಂಬಾ ಪಾರದರ್ಶಕತೆ ಅನುಸರಿಸಲಾಗುತ್ತದೆ’ ಎಂದು ಆನಂದ್ ಹೇಳಿದರು.

‘ಆಟದ ವಿಷಯದಲ್ಲಿಯಷ್ಟೇ ಅಲ್ಲ. ಹೋದ ವರ್ಷ  ವೀಸಾ ಪಡೆಯಲು ಸೈನಾ ನೆಹ್ವಾಲ್‌ಗೆ ಒಜಿಕ್ಯೂ ನೆರವಾಗಿದೆ. ರಿಯೊ ಒಲಿಂಪಿಕ್ಸ್‌ಗೆ ಒಂದು ವರ್ಷವಷ್ಟೇ ಬಾಕಿ ಇರುವ ಕಾರಣ ಪದಕ ಗೆಲ್ಲುವ ಭರವಸೆ ಮೂಡಿಸಿರುವ ಕ್ರೀಡಾಪಟುಗಳ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಲಾಗಿಗುತ್ತಿದೆ. ಕೆಲ ದಿನಗಳ ಹಿಂದೆ ರಕ್ತಪರೀಕ್ಷೆಯೂ ನಡೆಸಲಾಗಿತ್ತು. 2016ರ ಒಲಿಂಪಿಕ್ಸ್‌ನಲ್ಲಿ ಭಾರತ 10ರಿಂದ 12 ಪದಕಗಳನ್ನು ಜಯಿಸ ಬಹುದು’ ಎಂದು ಆನಂದ್ ಭರವಸೆ ವ್ಯಕ್ತಪಡಿಸಿದ್ದಾರೆ.

‘ಕೆಲ ರಾಜ್ಯಗಳು ನಿಗದಿತ ಕ್ರೀಡೆ ಗಳಿಗಷ್ಟೇ ಬೆಂಬಲ ನೀಡುತ್ತಿರುವುದು ಸರಿಯಲ್ಲ. ಒಜಿಕ್ಯೂ ಸೌಲಭ್ಯಗಳನ್ನು ನೀಡುತ್ತದೆ. ಅದೇ ರೀತಿ ಕ್ರೀಡಾಪಟು ಗಳಿಂದ ಉತ್ತಮ ಸಾಧನೆಯನ್ನೂ ನಿರೀಕ್ಷೆ ಮಾಡುತ್ತದೆ. ಆಟದ ಜೊತೆಗೆ ಸ್ಥಿರತೆ ಮತ್ತು ಫಿಟ್‌ನೆಸ್‌ ಕಾಪಾಡಿಕೊಳ್ಳಲು ಗಮನ ಹರಿಸಬೇಕು’ ಎಂದು ಆನಂದ್ ಸಲಹೆ ನೀಡಿದರು.

ಒಜಿಕ್ಯೂ ಅಥ್ಲೆಟಿಕ್ಸ್‌, ಬ್ಯಾಡ್ಮಿಂಟನ್‌, ಬಾಕ್ಸಿಂಗ್, ಶೂಟಿಂಗ್‌, ಕುಸ್ತಿ ಮತ್ತು ಆರ್ಚರಿ ಕ್ರೀಡೆಗಳಿಗೆ ಬೆಂಬಲ ನೀಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.