ADVERTISEMENT

ಸುರಾನ ಕಾಲೇಜಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2017, 19:30 IST
Last Updated 21 ನವೆಂಬರ್ 2017, 19:30 IST
ಪ್ರಶಸ್ತಿ ಗೆದ್ದ ಸುರಾನ ಕಾಲೇಜು ತಂಡ (ಎಡದಿಂದ ಬಲಕ್ಕೆ); ಶ್ರೇಯಸ್‌, ಮೊಸೆಸ್‌, ಶೀತಲ್ ಕಿರಣ್‌ (ಪಿ.ಇಡಿ), ವೆಂಕಟೇಶ್‌ ಎನ್‌. ಕುಮಾರ್‌ (ಡೀನ್‌), ಆದಿತ್ಯಾ ಎಸ್‌.ರಾಜ್‌, ಎಸ್‌.ಕಾರ್ತಿಕ್.
ಪ್ರಶಸ್ತಿ ಗೆದ್ದ ಸುರಾನ ಕಾಲೇಜು ತಂಡ (ಎಡದಿಂದ ಬಲಕ್ಕೆ); ಶ್ರೇಯಸ್‌, ಮೊಸೆಸ್‌, ಶೀತಲ್ ಕಿರಣ್‌ (ಪಿ.ಇಡಿ), ವೆಂಕಟೇಶ್‌ ಎನ್‌. ಕುಮಾರ್‌ (ಡೀನ್‌), ಆದಿತ್ಯಾ ಎಸ್‌.ರಾಜ್‌, ಎಸ್‌.ಕಾರ್ತಿಕ್.   

ಬೆಂಗಳೂರು: ಸುರಾನ ಕಾಲೇಜು ಬಾಲಕರ ತಂಡ ಇಲ್ಲಿ ನಡೆದ ಅಂತರ ಕಾಲೇಜು ಟೇಬಲ್ ಟೆನಿಸ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ.

ಫೈನಲ್‌ನಲ್ಲಿ ಸುರಾನ ಕಾಲೇಜು ತಂಡ 3–0ರಲ್ಲಿ ಟೂರ್ನಿ ಆಯೋಜಿಸಿದ್ದ ಬೆಂಗಳೂರು ಮೆಡಿಕಲ್ ಕಾಲೇಜ್‌ ಮತ್ತು ರಿಸರ್ಚ್‌ ಇನ್ಸ್‌ಟ್ಯೂಟ್ ತಂಡವನ್ನು ಮಣಿಸಿತು.

ಸೆಮಿಫೈನಲ್ ಪಂದ್ಯದಲ್ಲಿ ಸುರಾನ ತಂಡ 3–0ರಲ್ಲಿ ಬಿಎಮ್‌ಎಸ್‌ಐಟಿ ವಿರುದ್ಧ ಜಯದಾಖಲಿಸಿ ಫೈನಲ್ ತಲುಪಿತ್ತು. ತಂಡದಲ್ಲಿ ಶ್ರೇಯಸ್‌, ಮೊಸೆಸ್‌, ಆದಿತ್ಯಾ ಎಸ್‌. ರಾಜ್‌ ಮತ್ತು ಎಸ್‌.ಕಾರ್ತಿಕ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.