ADVERTISEMENT

ಸೆಮಿಫೈನಲ್‌ನಲ್ಲಿ ಭಾರತಕ್ಕೆ ಸೋಲು

​ಪ್ರಜಾವಾಣಿ ವಾರ್ತೆ
Published 28 ಜುಲೈ 2014, 19:30 IST
Last Updated 28 ಜುಲೈ 2014, 19:30 IST

ಗ್ಲಾಸ್ಗೊ (ಪಿಟಿಐ): ಆರಂಭಿಕ ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ತೋರಿದ್ದ ಭಾರತದ ಪುರುಷರ ಟೇಬಲ್‌ ಟೆನಿಸ್‌ ತಂಡ ಕಾಮನ್‌ವೆಲ್ತ್‌ ಕೂಟದ ಸೆಮಿಫೈನಲ್‌ನಲ್ಲಿ  ಸೋಲು ಕಂಡಿದೆ. 

ಆದರೂ  ಭಾರತಕ್ಕೆ ಕಂಚು ಗೆಲ್ಲುವ ಅವಕಾಶವಿದ್ದು ಇದಕ್ಕಾಗಿ ನೈಜೀರಿಯ ಎದುರಿನ ಪಂದ್ಯದಲ್ಲಿ  ಜಯ ಸಾಧಿಸಬೇಕಿದೆ.

ಭಾನುವಾರ ರಾತ್ರಿ ನಡೆದ ನಾಲ್ಕರ ಘಟ್ಟದ ಪಂದ್ಯದ ಸಿಂಗಲ್ಸ್‌ನಲ್ಲಿ  ಶರತ್‌ ಕಮಲ್‌  4–11, 11–8, 11–9, 5–11, 6–11ರಲ್ಲಿ  ರ್‍ಯಾಂಕಿಂಗ್‌ನಲ್ಲಿ  ತಮಗಿಂತಲೂ ಕೆಳಗಿನ ಸ್ಥಾನದಲ್ಲಿರುವ ಲಿಯಾಮ್ ಪಿಚ್‌ಫೋರ್ಡ್‌್ ಎದುರು ಆಘಾತ ಅನುಭವಿಸಿದರು. ಹೀಗಾಗಿ ಭಾರತಕ್ಕೆ ಆರಂಭದಲ್ಲೇ ಹಿನ್ನಡೆ ಉಂಟಾಯಿತು.

ಎರಡನೇ ಸಿಂಗಲ್ಸ್‌ನಲ್ಲಿ    ಅಂಥೋಣಿ ಅಮೃತ್‌ರಾಜ್‌ ಅವರನ್ನು 11–5, 11–8, 11–9ರಲ್ಲಿ ಮಣಿ ಸಿದ  ಪಾಲ್‌ ಡ್ರಿಂಕ್‌ಹಾಲ್‌ ಇಂಗ್ಲೆಂಡ್‌ ಗೆ 2–0ರ ಮುನ್ನಡೆ ತಂದುಕೊಟ್ಟರು.


ಆದರೆ ಡಬಲ್ಸ್‌ನಲ್ಲಿ  ಅಂತೋಣಿ ಅಮೃತ್‌ರಾಜ್‌ ಮತ್ತು ಹರ್ಮೀತ್‌  7–11, 16–14, 11–8, 7–11, 13–11ರಲ್ಲಿ  ಜಯ ದಾಖಲಿಸಿ ಭಾರತದ ಫೈನಲ್‌ ಆಸೆಯನ್ನು ಜೀವಂತವಾ ಗಿರಿಸಿದರು.

ಮೂರನೇ ಸಿಂಗಲ್ಸ್‌ನಲ್ಲಿ ಹರ್ಮೀತ್‌ ಅಮೋಘ ಪ್ರದರ್ಶನದ ಹೊರತಾ ಗಿಯೂ  5–11, 6–11, 12–10, 12–10, 15–17ರಲ್ಲಿ ಪಿಚ್‌ ಪೋರ್ಡ್‌್ ಎದುರು ಸೋಲು ಕಂಡ ಕಾರಣ ಭಾರತ ನಿರಾಸೆ ಅನುಭವಿಸ ಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT