ADVERTISEMENT

ಸ್ಕ್ವಾಷ್‌: ನವನೀತ್‌ ಪ್ರಭುಗೆ ಬಂಗಾರ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2014, 19:53 IST
Last Updated 21 ಡಿಸೆಂಬರ್ 2014, 19:53 IST

ಸಿಂಗಪುರ (ಐಎಎನ್‌ಎಸ್‌): ಭಾರತದ ನವನೀತ್‌ ಪ್ರಭು ಇಲ್ಲಿ ಮುಕ್ತಾಯಗೊಂಡ ಸಿಂಗಪುರ ಓಪನ್‌ ಜೂನಿಯರ್ ಸ್ಕ್ವಾಷ್‌ ಟೂರ್ನಿಯಲ್ಲಿ  ಬಂಗಾರದ ಪದಕಕ್ಕೆ ಕೊರಳೊಡ್ಡಿದ್ದಾರೆ.

ಭಾನುವಾರ ನಡೆದ  13 ವರ್ಷ ವಯಸ್ಸಿನೊಳಗಿನವರ ಬಾಲಕರ ವಿಭಾಗದ ಫೈನಲ್‌ ಹಣಾಹಣಿಯಲ್ಲಿ  ನವನೀತ್‌ 8–11, 11–6, 11–8, 12–10ರಲ್ಲಿ ಮಲೇಷ್ಯಾದ ನಿಕೊಲಾಸ್‌ ಚೀ ಎದುರು ಗೆದ್ದರು.

ಜೋಶಿಗೆ ಮೂರನೇ ಸ್ಥಾನ: ಸೆಮಿಫೈನಲ್‌ನಲ್ಲಿ ನವನೀತ್‌ ಎದುರು ಸೋಲು ಕಂಡಿದ್ದ  ಭಾರತದ ನೀಲ್‌ ಜೋಶಿ ಮೂರನೇ ಸ್ಥಾನ ನಿರ್ಧರಿಸಲು ನಡೆದ ಹೋರಾಟದಲ್ಲಿ 3–0ರಲ್ಲಿ ಮಲೇಷ್ಯಾದ ಇಶಾಂತ್‌ ಷಾ ಎದುರು  ಗೆದ್ದರು. ಅಗ್ರ ಶ್ರೇಯಾಂಕಿತ ಆಟಗಾರ ಸಮಿತಾ ಶಿವಕುಮಾರ್‌ 7–11, 11–6, 7–11, 9–11ರಲ್ಲಿ ಮಲೇಷ್ಯಾದ ಲಿಯೆನ್‌ ತೆಯೊಹ್‌ ಎದುರು ಸೋತು ಆರನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಬಾಲಕಿಯರ 13 ವರ್ಷ ವಯಸ್ಸಿನವರ ವಿಭಾಗದ ‘ಪ್ಲೇ ಆಫ್‌’ ಪಂದ್ಯದಲ್ಲಿ ಜೆ.ಎಸ್. ಕೃತಿಕಾ  11–3, 11–7, 11–7ರಲ್ಲಿ ಮಲೇಷ್ಯಾದ ವಸುಂಧರ ವಸಂತನ್‌ ಎದುರು ಗೆದ್ದು ಏಳನೇ ಸ್ಥಾನದೊಂದಿಗೆ ಸ್ಪರ್ಧೆ ಕೊನೆಗೊಳಿಸಿದರು. 19 ವರ್ಷ ದೊಳಗಿನವರ ಬಾಲಕಿಯರ ವಿಭಾಗ ದಲ್ಲಿ ನಿಖಿತಾ ಜೋಶಿ ಮಲೇಷ್ಯಾದ ನತಾಶ ಚಿನ್‌ ಅವರನ್ನು ಪರಾಭವ ಗೊಳಿಸಿ ಐದನೇ ಸ್ಥಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.