ADVERTISEMENT

ಹರಿಕಾಗೆ ಜಯ

ಐಎಎನ್ಎಸ್
Published 24 ಏಪ್ರಿಲ್ 2017, 19:30 IST
Last Updated 24 ಏಪ್ರಿಲ್ 2017, 19:30 IST

ರೇಕ್‌ಜಾವಿಕ್‌: ಭಾರತದ ಗ್ರ್ಯಾಂಡ್‌ ಮಾಸ್ಟರ್‌ ಹರಿಕಾ ದ್ರೋಣವಳ್ಳಿ ಅವರು ಇಲ್ಲಿ ನಡೆಯುತ್ತಿರುವ ರೇಕ್‌ಜಾವಿಕ್‌ ಓಪನ್‌ ಚೆಸ್‌ ಟೂರ್ನಿಯ ಆರನೇ ಸುತ್ತಿನ ಪಂದ್ಯದಲ್ಲಿ ಗೆಲುವು ಗಳಿಸಿದ್ದಾರೆ. ಭಾನುವಾರ ನಡೆದ ಪಂದ್ಯದಲ್ಲಿ ಹರಿಕಾ ಅವರು ವಿಗ್ನಿರ್‌ ವತನಾರ್‌ ಅವರ ಸವಾಲು ಮೀರಿ ನಿಂತರು.

ಐದನೇ ಸುತ್ತಿನ ಹಣಾಹಣಿಯಲ್ಲಿ ನಿರಾಸೆ ಕಂಡಿದ್ದ ಭಾರತದ ಆಟಗಾರ್ತಿ ವಿಗ್ನಿರ್‌ ವಿರುದ್ಧದ ಹೋರಾಟದಲ್ಲಿ ಅಮೋಘ ಸಾಮರ್ಥ್ಯ ತೋರಿದರು. ಆರಂಭದಿಂದಲೇ ಚುರುಕಾಗಿ ಕಾಯಿಗಳನ್ನು ಮುನ್ನಡೆಸಿದ ಹರಿಕಾ ಅವರು ಎದುರಾಳಿಯ ಮೇಲೆ ಒತ್ತಡ ಹೇರಿ 38ನೇ ನಡೆಯಲ್ಲಿ ಗೆಲುವು ಒಲಿಸಿಕೊಂಡರು. ಇನ್ನೂ ನಾಲ್ಕು ಸುತ್ತುಗಳ ಆಟ ಬಾಕಿ ಉಳಿದಿದ್ದು ಹರಿಕಾ ಅವರು ಪಾಯಿಂಟ್ಸ್‌ ಪಟ್ಟಿಯಲ್ಲಿ 28ನೇ ಸ್ಥಾನ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.