ADVERTISEMENT

ಹಾಕಿ ಕೂರ್ಗ್‌ ಶುಭಾರಂಭ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 19:30 IST
Last Updated 24 ಏಪ್ರಿಲ್ 2017, 19:30 IST
ಹಾಕಿ ಕೂರ್ಗ್‌ ಮತ್ತು ವಿದರ್ಭ ನಡುವಣ ಪೈಪೋಟಿ ಪ್ರಜಾವಾಣಿ ಚಿತ್ರ
ಹಾಕಿ ಕೂರ್ಗ್‌ ಮತ್ತು ವಿದರ್ಭ ನಡುವಣ ಪೈಪೋಟಿ ಪ್ರಜಾವಾಣಿ ಚಿತ್ರ   

ಬೆಂಗಳೂರು: ಚುರುಕಿನ ಆಟವಾಡಿದ ಹಾಕಿ ಕೂರ್ಗ್ ತಂಡದವರು ಇಲ್ಲಿನ ಹಾಕಿ ಕ್ರೀಡಾಂಗಣದಲ್ಲಿ ಸೋಮವಾರ ಆರಂಭವಾದ ಏಳನೇ ಸಬ್‌ ಜೂನಿಯರ್ (‘ಬಿ’ ಡಿವಿಷನ್‌) ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದ್ದಾರೆ.

ಹಾಕಿ ಕೂರ್ಗ್‌ ತಂಡ 13–0 ಗೋಲುಗಳಿಂದ ವಿದರ್ಭ ಎದುರು ಸುಲಭವಾಗಿ ಗೆಲುವು ಪಡೆಯಿತು. ವಿಜಯೀ ತಂಡದ ಎಂ.ಕೆ. ಚೇತನ್ (15, 51, 58, 63ನೇ ನಿಮಿಷ) ನಾಲ್ಕು ಗೋಲುಗಳನ್ನು ಕಲೆ ಹಾಕಿದರು.

ಪಿ. ವಿನೇಶ್ (13 ಹಾಗೂ 34ನೇ ನಿ.), ಸುಕುಲ್‌ ಯಾನ್‌ ಮಂಡಲ್‌ (25 ಹಾಗೂ 47ನೇ ನಿ.), ಆಶಿಕ್‌ ಉತ್ತಪ್ಪ (4 ಹಾಗೂ 66ನೇ ನಿ.), ಪ್ರಣಮ್‌ ಗೌಡ (9ನೇ ನಿ.), ಎನ್‌.ಟಿ. ತರುಣ್ (41ನೇ ನಿ.) ಮತ್ತು ಬಿ.ಆರ್‌. ದೀಪಕ್‌ ಯಾದವ್ 69ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ ಗೆಲುವಿನ ಅಂತರ ಹೆಚ್ಚಿಸಿದರು.

ದಿನದ ಇನ್ನೊಂದು ಪಂದ್ಯದಲ್ಲಿ ಮುಂಬೈ ತಂಡ 8–3 ಗೋಲುಗಳಿಂದ ಹಾಕಿ ಮಧ್ಯಭಾರತ್ ಎದುರು ಜಯ ಸಾಧಿಸಿತು. ಇನ್ನಷ್ಟು ಪಂದ್ಯಗಳಲ್ಲಿ ನಾಮಧಾರಿ ಇಲೆವನ್‌ 3–0ರಲ್ಲಿ ಗುಜರಾತ್ ಕ್ರೀಡಾ ಪ್ರಾಧಿಕಾರದ ಮೇಲೂ, ಬಂಗಾಳ ತಂಡ 7–2ರಲ್ಲಿ ತೆಲಂಗಾಣದ ವಿರುದ್ಧವೂ ಗೆಲುವು ಪಡೆದವು. ಪುದುಚೇರಿ ಮತ್ತು ಗೋವನ್ಸ್ ನಡುವಣ ಪಂದ್ಯ 3–3 ಗೋಲುಗಳಿಂದ ಸಮಬಲವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT