ADVERTISEMENT

ಹಾಕಿ ಟೆಸ್ಟ್‌: ನ್ಯೂಜಿಲೆಂಡ್‌ ವಿರುದ್ಧ ಭಾರತಕ್ಕೆ ಸೋಲು

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2015, 10:41 IST
Last Updated 6 ಅಕ್ಟೋಬರ್ 2015, 10:41 IST
–ಸಂಗ್ರಹ ಚಿತ್ರ
–ಸಂಗ್ರಹ ಚಿತ್ರ   

ನವದೆಹಲಿ (ಪಿಟಿಐ):  ನ್ಯೂಜಿಲೆಂಡ್‌ ವಿರುದ್ಧದ 4 ಹಾಕಿ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ  ಭಾರತ ನಿರಾಸೆ ಅನುಭಿಸಿದೆ. ನೆಲ್ಸನ್‌ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ‘ಬ್ಲ್ಯಾಕ್‌ ಸ್ಟಿಕ್ಸ್‌ ಮೆನ್’ ನ್ಯೂಜಿಲೆಂಡ್ ತಂಡವು  ಸರ್ದಾರ್‌ಸಿಂಗ್ ಬಳಗವನ್ನು 0–2ರಲ್ಲಿ ಮಣಿಸಿತು.

2014ರ ಹೀರೊ ಹಾಕಿ ವಿಶ್ವ ಲೀಗ್ ಫೈನಲ್‌ನಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಿದ್ದವು. ನ್ಯೂಜಿಲೆಂಡ್ ತಂಡವು ಭರ್ಜರಿ ಜಯ ಗಳಿಸಿ ಪ್ರಶಸ್ತಿ ಗಳಿಸಿತ್ತು. ಈ ಬಾರಿಯೂ ತವರಿನ ಅಂಗಳದಲ್ಲಿ ಪ್ರವಾಸಿ ಭಾರತದ ಎದುರು ನ್ಯೂಜಿಲೆಂಡ್ ಮೇಲುಗೈ ಸಾಧಿಸಿದೆ.

ನ್ಯೂಜಿಲೆಂಡ್ ಪರವಾಗಿ  ಪಂದ್ಯ ಆರಂಭಗೊಂಡ 5ನೇ ನಿಮಿಷದಲ್ಲೇ ನಿಕ್‌ ಹೈಗ್‌ ಗೋಲು ತಂದಿತ್ತರು. ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ನಿಕ್‌ ಯಶಸ್ವಿಯಾದರು. ನಂತರ ಭಾರತ ರಕ್ಷಣೆ ಆಟಕ್ಕೆ ಆದ್ಯತೆ ನೀಡಿದರೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಆಕಾಶದೀಪ್ ಸಿಂಗ್ ಮತ್ತು  ರಮಣದೀಪ್ ಸಿಂಗ್ ನಡೆಸಿದ ಪ್ರಯತ್ನಗಳನ್ನು ನ್ಯೂಜಿಲೆಂಡ್‌ನ ರಕ್ಷಣಾ ಪಡೆ ಸಮರ್ಥವಾಗಿ ತಡೆಯಿತು.

ನ್ಯೂಜಿಲೆಂಡ್‌ನ ಜರೆಡ್‌ ಪಂಚಿಯಾ 27ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸುವ ಮೂಲಕ ಗೆಲುವಿನ ಅಂತರವನ್ನು ಹಿಗ್ಗಿಸಿಕೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.