ADVERTISEMENT

’ದ್ರಾವಿಡ್ ನೆರವಿಲ್ಲದೆ ಪುನಾರಚನೆ ಕಾರ್ಯ ಅಪೂರ್ಣ’

​ಪ್ರಜಾವಾಣಿ ವಾರ್ತೆ
Published 2 ಜೂನ್ 2015, 19:30 IST
Last Updated 2 ಜೂನ್ 2015, 19:30 IST

ನವದೆಹಲಿ (ಪಿಟಿಐ): ‘ರಾಹುಲ್‌ ದ್ರಾವಿಡ್‌ ಅವರ ಸಹಕಾರ ಮತ್ತು ಸಲಹೆಗಳಿಲ್ಲದೆ ಹೋದರೆ  ಬಿಸಿಸಿಐ ರಚನಾತ್ಮಕ ಕಾರ್ಯಗಳು, ನೂತನ ಯೋಜನೆಗಳು ಅಪೂರ್ಣ ಎನಿಸುತ್ತವೆ’ ಎಂದು ಬಿಸಿಸಿಐ ಅಧ್ಯಕ್ಷ ಜಗಮೋಹನ್‌ ದಾಲ್ಮಿಯಾ ಅಭಿಪ್ರಾಯಪಟ್ಟಿದ್ದಾರೆ.

ಬಿಸಿಸಿಐ ಸೋಮವಾರ ನೂತನ ಸಲಹಾ ಸಮಿತಿ ನೇಮಿಸಿತ್ತು.ಇದರಲ್ಲಿ ದ್ರಾವಿಡ್‌ ಹೆಸರು ಇರಲಿಲ್ಲ.

‘ನಮ್ಮೆಲ್ಲಾ ಯೋಜನೆಗಳಿಗೆ ದ್ರಾವಿಡ್‌ ಅವರ ಸಹಕಾರ ಅತ್ಯಗತ್ಯ. ಬಿಸಿಸಿಐಗೆ ನಾವೀಗ ಹೊಸ ರೂಪ ನೀಡಲು ಮುಂದಾಗಿದ್ದೇವೆ. ಈ ಕಾರ್ಯದಲ್ಲಿ ದ್ರಾವಿಡ್‌ ಅವರೂ ಬಹುಮುಖ್ಯ ಪಾತ್ರ ನಿರ್ವಹಿಸಲಿದ್ದಾರೆ. ದ್ರಾವಿಡ್‌ ನಮ್ಮ ಜೊತೆ ಕೈಜೋಡಿಸದ ಹೊರತು ಇದ್ಯಾವುದೂ ಪೂರ್ಣವಾಗುವುದಿಲ್ಲ’ ಎಂದು ದಾಲ್ಮಿಯಾ ಖಾಸಗಿ  ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

‘ಕ್ರಿಕೆಟ್‌ ಆಟವನ್ನು ಕಳಂಕ ಮುಕ್ತ ವಾಗಿಸುವ ಜತೆಗೆ ತಂಡದ ಸಹಾಯಕ ಸಿಬ್ಬಂದಿಗಳನ್ನು ನೇಮಿಸುವ ಕಾರ್ಯದಲ್ಲಿ ಎಲ್ಲಾ ಹಿರಿಯ ಆಟಗಾರರು ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ.  ಮುಂದಿನ ದಿನಗಳಲ್ಲಿ ಇನ್ನಷ್ಟು ಆಟಗಾರರಿಗೆ ಹೊಸ ಜವಾಬ್ದಾರಿಗಳನ್ನು ನೀಡುವ ಆಲೋಚನೆ ಇದೆ. ಅಲ್ಲಿಯವರೆಗೂ ಎಲ್ಲರೂ ತಾಳ್ಮೆ ಯಿಂದರಬೇಕು. ಅವರ ಎಲ್ಲಾ ಆಲೋ ಚನೆಗಳಿಗೂ ನಾವು ಸ್ಪಂದಿಸುತ್ತೇವೆ’ ಎಂದೂ ಅವರು ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.