ADVERTISEMENT

2019ರ ಏಕದಿನ ಕ್ರಿಕೆಟ್‌ ವಿಶ್ವಕಪ್‌: ಪಂದ್ಯಾವಳಿಗಳ ಸಂಪೂರ್ಣ ವೇಳಾಪಟ್ಟಿ

ಏಜೆನ್ಸೀಸ್
Published 26 ಏಪ್ರಿಲ್ 2018, 12:37 IST
Last Updated 26 ಏಪ್ರಿಲ್ 2018, 12:37 IST
ಸಂಗ್ರಹ ಚಿತ್ರ.
ಸಂಗ್ರಹ ಚಿತ್ರ.   

ಕೋಲ್ಕತ್ತ: 2019ರ ಮೇ 30ರಿಂದ ಜುಲೈ 15ರ ವರೆಗೆ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗಳ ವೇಳಾಪಟ್ಟಿ ಪ್ರಕಟವಾಗಿದೆ.

ಭಾರತ ಈ ಟೂರ್ನಿಯ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ. 

ಭಾಗವಹಿಸುವ ರಾಷ್ಟ್ರಗಳು: ಭಾರತ, ಇಂಗ್ಲೆಂಡ್‌, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್‌, ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ, ಅಫ್ಘಾನಿಸ್ಥಾನ, ವೆಸ್ಟ್‌ ಇಂಡೀಸ್‌.

ADVERTISEMENT

ಲಾರ್ಡ್ಸ್ ಕ್ರೀಡಾಂಗಣದಲ್ಲಿ ಫೈನಲ್‌ ಪಂದ್ಯ ನಡೆಯಲಿದೆ. ಲೀಗ್‌ ಹಂತ ಪಂದ್ಯಗಳು ಓವಲ್‌, ಎಡ್ಗ್‌ಬಸ್ಟನ್‌, ಟ್ರೆಂಟ್‌ ಬ್ರಿಡ್ಜ್‌, ಹೆಡಿಂಗ್ಲೆ, ಕಾರ್ಡಿಫ್‌, ಸೌತಾಂಪ್ಟನ್‌, ಬ್ರಿಸ್ಟಲ್‌, ಓಲ್ಡ್‌ ಟ್ರಾಫೋರ್ಡ್‌, ಟೌನ್‌ಟನ್, ಕ್ರೀಡಾಂಗಣಗಳಲ್ಲಿ ನಡೆಯಲಿವೆ.

ಭಾರತ ಆಡಲಿರುವ ಪಂದ್ಯಗಳು
* ಜೂ. 5: ಭಾರತ – ದಕ್ಷಿಣ ಆಫ್ರಿಕಾ
* ಜೂ.9: ಭಾರತ – ಆಸ್ಟ್ರೇಲಿಯಾ
* ಜೂ.13: ಭಾರತ– ನ್ಯೂಜಿಲೆಂಡ್‌
* ಜೂ. 16: ಭಾರತ–  ಪಾಕಿಸ್ತಾನ
* ಜೂ. 22: ಭಾರತ– ಅಫ್ಘಾನಿಸ್ಥಾನ
* ಜೂ. 27: ಭಾರತ – ವೆಸ್ಟ್‌ ಇಂಡೀಸ್‌
* ಜೂ. 30: ಭಾರತ– ಇಂಗ್ಲೆಂಡ್‌
* ಜು. 2: ಭಾರತ– ಬಾಂಗ್ಲಾ
* ಜು.6: ಭಾರತ – ಶ್ರೀಲಂಕಾ

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.