ನವದೆಹಲಿ (ಪಿಟಿಐ): ಅವಿ ಬಾರೋಟ್ ಮತ್ತು ಯುವ ಬ್ಯಾಟ್ಸ್ಮನ್ ಅರ್ಪಿತ್ ವಾಸವಡ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಸೌರಾಷ್ಟ್ರ ತಂಡದವರು ವಿಜಯ್ ಹಜಾರೆ
ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ಗೆ ಪ್ರವೇಶಿಸಿದರು. ಗುರುವಾರ ನಡೆದ ಪಂದ್ಯದಲ್ಲಿ ಈ ತಂಡ ಬರೋಡವನ್ನು ಮೂರು ವಿಕೆಟ್ಗಳಿಂದ ಮಣಿಸಿತು.
ಸಂಕ್ಷಿಪ್ತ ಸ್ಕೋರ್: ಬರೋಡ: 50 ಓವರ್ಗಳಲ್ಲಿ 8ಕ್ಕೆ247 (ಕೃಣಾಲ್ ಪಾಂಡ್ಯ 61, ಶೋಯೆಬ್ ತಾಯ್ 72; ಚಿರಾಗ್ ಜಾನಿ 25ಕ್ಕೆ4); ಸೌರಾಷ್ಟ್ರ: 48.4 ಓವರ್ಗಳಲ್ಲಿ 7ಕ್ಕೆ 251 (ಅವಿ ಬಾರೋಟ್ 82, ಚೇತೇಶ್ವರ್ ಪೂಜಾರ 40, ಅರ್ಪಿತ್ ವಾಡವಡ 45). ಫಲಿತಾಂಶ: ಸೌರಾಷ್ಟ್ರ ತಂಡಕ್ಕೆ ಮೂರು ವಿಕೆಟ್ಗಳ ಜಯ; ಸೆಮಿಫೈನಲ್ಗೆ ಪ್ರವೇಶ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.