ADVERTISEMENT

ಕ್ರೀಡಾಪಟುಗಳ ಮಾಹಿತಿ ಡಿಜಿಟಲೀಕರಣ

​ಪ್ರಜಾವಾಣಿ ವಾರ್ತೆ
Published 29 ಜನವರಿ 2017, 19:30 IST
Last Updated 29 ಜನವರಿ 2017, 19:30 IST
ಆ್ಯಪ್ ಹೆಸರು– ಸ್ಕೋರ್‌ಅಪ್‌–ಕೆಓಎ ರೇಟಿಂಗ್‌– 3+ ಆವೃತ್ತಿ– 0.0.1 ಡೌನ್‌ಲೋಡ್‌ ಗಾತ್ರ– 7.16ಎಂಬಿ
ಆ್ಯಪ್ ಹೆಸರು– ಸ್ಕೋರ್‌ಅಪ್‌–ಕೆಓಎ ರೇಟಿಂಗ್‌– 3+ ಆವೃತ್ತಿ– 0.0.1 ಡೌನ್‌ಲೋಡ್‌ ಗಾತ್ರ– 7.16ಎಂಬಿ   

ಈ ಬಾರಿಯ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳು ಹಾಗೂ ಕ್ರೀಡಾಪ್ರೇಮಿಗಳಿಗೆ ಅಗತ್ಯವಿರುವ ಪ್ರತಿಯೊಂದು ಮಾಹಿತಿ ನೀಡಲು ಅಂತರ್ಜಾಲ ಪುಟ ಹಾಗೂ ಮೊಬೈಲ್‌ ಆ್ಯಪ್‌ ಅನ್ನು ರಾಜ್ಯ ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಒಲಿಂಪಿಕ್ಸ್‌ ಸಂಸ್ಥೆ ಜತೆಗೂಡಿ ಅಭಿವೃದ್ಧಿಗೊಳಿಸಿದೆ.

ಬೆಂಗಳೂರಿನ ಸ್ಕೋರ್‌ಅಪ್‌ ಸ್ಪೋರ್ಟ್ಸ್‌ ಎಂಬ ಸಾಫ್ಟ್‌ವೇರ್ ಕಂಪೆನಿಯು ಈ ಆ್ಯಪ್‌ ಹಾಗೂ ಅಂತರ್ಜಾಲ  ತಾಣವನ್ನು ಅಭಿವೃದ್ಧಿಪಡಿಸಿದೆ. ಆ್ಯಂಡ್ರಾಯ್ಡ್‌ ಮೊಬೈಲ್‌ ಹೊಂದಿರುವವರು ಈ ಮೊಬೈಲ್‌ ಆ್ಯಪ್‌ ಅನ್ನು ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಮೊಬೈಲ್ ಸಂಖ್ಯೆ ನೀಡುವ ಮೂಲಕ ಇದರಲ್ಲಿ ಹೆಸರು ನೋಂದಾಯಿಸಬಹುದು. ಇದರಿಂದ ಕ್ರೀಡೆಗಳು ನಡೆಯುವ ತಾಣ, ಕ್ರೀಡೆಗಳ ಮಾಹಿತಿ, ಕ್ರೀಡಾಪಟುವಿನ ಈ ಹಿಂದಿನ ದಾಖಲೆ, ಹಾಗೂ ಸದ್ಯದ ಸ್ಪರ್ಧೆಗಳ ತಕ್ಷಣದ ಫಲಿತಾಂಶಗಳು ಲಭ್ಯ.

ಇಷ್ಟು ಮಾತ್ರವಲ್ಲ, ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ತಂಗಲು ಮಾಡಿರುವ ವಸತಿ ವ್ಯವಸ್ಥೆ, ಸಾರಿಗೆ ವ್ಯವಸ್ಥೆ ಇತ್ಯಾದಿಗಳು ನಕ್ಷೆಯ ಮೂಲಕ ಮಾಹಿತಿ ಸಿಗಲಿದೆ. ತುರ್ತು ಪರಿಸ್ಥಿತಿಯಲ್ಲಿ ಸಂಪರ್ಕಿಸಬೇಕಾದ ಸಂಖ್ಯೆ, ಕ್ರೀಡೆಯ ರೋಚಕ ಕ್ಷಣಗಳ ಚಿತ್ರಗಳು ಇತ್ಯಾದಿಗಳು ಈ ತಾಣದಲ್ಲಿ ಲಭ್ಯ.

ರಾಜ್ಯ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ಕ್ರೀಡಾಪಟುವಿನ ಸಚಿತ್ರ ಮಾಹಿತಿ ಲಭ್ಯ. ಅವಳಿ ನಗರದಲ್ಲಿ ನಡೆಯಲಿರುವ ಪ್ರತಿಯೊಂದು ಸ್ಪರ್ಧೆಯ ಎಲ್ಲಾ ಮಾಹಿತಿಗಳು ಡಿಜಿಟಲೀಕರಣಗೊಳ್ಳಲಿದೆ. ಆ ಮೂಲಕ ರಾಜ್ಯದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳ ಸಂಪೂರ್ಣ ಮಾಹಿತಿಗಳನ್ನು ಜಗತ್ತಿನಾದ್ಯಂತ ಆಸಕ್ತರು ನೋಡಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.