ADVERTISEMENT

ಮಾಡಿ ಕಲಿ

ಸರಣಿ–62

ಪ್ರೊ.ಸಿ ಡಿ ಪಾಟೀಲ್
Published 20 ಏಪ್ರಿಲ್ 2014, 19:30 IST
Last Updated 20 ಏಪ್ರಿಲ್ 2014, 19:30 IST

ಬೇಕಾಗುವ ಸಾಮಗ್ರಿಗಳು: ಒಂದು ದಪ್ಪವಾದ ಪ್ಲಾಸ್ಟಿಕ್ ಚೀಲ, ಊದುಗೊಳವೆ, ದಾರ, ಪುಸ್ತಕಗಳು, ಟೇಬಲ್.

ವಿಧಾನ: ಒಂದು ದಪ್ಪವಾದ ಪ್ಲಾಸ್ಟಿಕ್ ಚೀಲವನ್ನು ತೆಗದುಕೊಳ್ಳಿ. ಚಿತ್ರದಲ್ಲಿ ತೋರಿಸಿದಂತೆ, ಪ್ಲಾಸ್ಟಿಕ್ ಚೀಲದಲ್ಲಿ  ಒಂದು ಊದುಗೊಳವೆಯನ್ನಿಟ್ಟು ದಾರದಿಂದ ಗಟ್ಟಿಯಾಗಿ ಕಟ್ಟಿ. ಪ್ಲಾಸ್ಟಿಕ್ ಚೀಲದ ಮೇಲೆ ಒಂದೆರಡು ಪುಸ್ತಕಗಳನ್ನಿಡಿ.

******
ಪ್ರಶ್ನೆ: ಊದುಗೊಳವೆಯ ಮುಖಾಂತರ ಊದುತ್ತಾ ಇರಿ.  ಏನಾಗುತ್ತದೆ? ಯಾಕೆ?

ADVERTISEMENT

ಉತ್ತರ: ಪ್ಲಾಸ್ಟಿಕ್ ಚೀಲದಲ್ಲಿ ಗಾಳಿ ಸೇರಿದಂತೆ, ಚೀಲ ಉಬ್ಬುತ್ತ ಹೋಗುತ್ತದೆ. ಅದರ ಮೇಲಿಟ್ಟ ಪುಸ್ತಕಗಳು ಮೇಲೇಳುತ್ತವೆ. ಗಾಳಿಯ ಬಲವು ಪುಸ್ತಕಗಳನ್ನು ಮೇಲೆತ್ತುತ್ತದೆ. ಗಾಳಿತುಂಬಿ ಉಪಯೋಗಿಸುವ ತಲೆದಿಂಬು ಹೀಗೆ ಕೆಲಸ ಮಾಡುತ್ತದೆ. ವಾಹನಗಳ ಗಾಲಿಗಳಲ್ಲಿ ಗಾಳಿಯನ್ನು ತುಂಬಿ ಘರ್ಷಣೆಯನ್ನು ಕಡಿಮೆ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.