ADVERTISEMENT

ರಫೆಲ್‌ ನಡಾಲ್‌ ಚಾಂಪಿಯನ್‌

ರಾಯಿಟರ್ಸ್
Published 13 ಆಗಸ್ಟ್ 2018, 20:15 IST
Last Updated 13 ಆಗಸ್ಟ್ 2018, 20:15 IST
ರಫೆಲ್‌ ನಡಾಲ್‌
ರಫೆಲ್‌ ನಡಾಲ್‌   

ಟೊರಾಂಟೊ: ಸ್ಪೇನ್‌ನ ರಫೆಲ್‌ ನಡಾಲ್‌ ಇಲ್ಲಿ ಮುಕ್ತಾಯಗೊಂಡ ಟೊರಾಂಟೊ ಮಾಸ್ಟರ್ಸ್‌ ಟೆನಿಸ್‌ ಟೂರ್ನಿಯ ಪ್ರಶಸ್ತಿ ಗೆದ್ದಿದ್ದಾರೆ.

ಭಾನುವಾರ ತಡರಾತ್ರಿ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ ಪಂದ್ಯದಲ್ಲಿ ನಡಾಲ್‌, 6-2, 7-6ರಿಂದ ಗ್ರೀಸ್‌ನ ಸ್ಟೆಫಾನೊಸ್‌ ಸಿಟ್ಸಿಪಾಸ್‌ ಅವರನ್ನು ಮಣಿಸಿದರು.ಮೊದಲ ಸೆಟ್‌ನಲ್ಲಿ ಅವರ ಮುಂದೆ ಸ್ಟೆಫಾನೊಸ್‌ ಮಂಕಾ ದರು. ಆದರೆ, ಎರಡನೇ ಸೆಟ್‌ನ ಆರಂಭದಲ್ಲಿ ತಿರುಗೇಟು ನೀಡಿದರು. ನಂತರ ಎಚ್ಚೆತ್ತು ಕೊಂಡ ರಫೆಲ್‌, ಪಂದ್ಯ ಗೆದ್ದರು.

ಪಂದ್ಯದ ನಂತರ ಮಾತ ನಾಡಿದ ನಡಾಲ್‌ ‘ಫಿಟ್‌ನೆಸ್‌ಗೆ ಒತ್ತು ನೀಡಬೇಕಿದ್ದು ಕೆಲವು ದಿನ ವಿಶ್ರಾಂತಿ ಅಗತ್ಯವಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.